ಹುಬ್ಬಳ್ಳಿಯಲ್ಲಿ ಬೈಕ್ ಸ್ಕಿಡ್- ಪೊಲೀಸ್ ಗೆ ಗಂಭೀರ ಗಾಯ…

ಹುಬ್ಬಳ್ಳಿ: ನಗರದ ಗಬ್ಬೂರು ಬೈಪಾಸ್ ಬಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬೈಕ್ ಮೇಲಿಂದ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹುಬ್ಬಳ್ಳಿಯ CAR ಹೆಡ್ ಕ್ವಾಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ ಪಾಟೀಲ ಎಂಬ ಕಾನ್ಸ್ಟೇಬಲ್, ಅದರಗುಂಚಿಯಿಂದ ಹುಬ್ಬಳ್ಳಿಗೆ ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು.
ಕೂಡಲೇ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು,ಕಿರಣ ಪಾಟೀಲ್ ಪರಿಸ್ಥಿತಿ ಗಂಭೀರವಾಗಿದೆ ಅಂತಾ ಹೇಳಲಾಗುತ್ತಿದ್ದು.ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.