ಲಾರಿ ಡಿಕ್ಕಿಗೆ ಎರಡು ತುಂಡಾದ ಟ್ರ್ಯಾಕ್ಟರ್: ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ನಾಲ್ವರು…!

ಅಣ್ಣಿಗೇರಿ: ತಾಲೂಕಿನ ನಲವಡಿ ಟೋಲ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ, ಕೆಲವೇ ನಿಮಿಷಗಳ ಹಿಂದೆ ನಡೆದಿದೆ.

ಘಟನೆಯಲ್ಲಿ ಪ್ರಕಾಶ ಅಡವಿ (40) ಕಾರ್ತಿಕ (15) ಮಹಾಂತೇಶ ನಲವಡಿ ಎಂದು ಗುರುತಿಸಲಾಗಿದ್ದು ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಲಾರಿ ಚಾಲಕ ಘಟನೆಯ ನಂತರ ಪರಾರಿಯಾಗಿದ್ದಾನೆ.
ಹೊಲಕ್ಕೆ ಬಿತ್ತಲು ಹೋಗಿದ್ದ ನಲವಡಿಯ ರೈತರು ತನ್ನ ಹೊಲದಿಂದ ಹೆದ್ದಾರಿಗೆ ಹೊಂದಿಕೊಂಡಿರುವ ಬದುವಿನ ರಸ್ತೆಗೆ ಟ್ಯಾಕ್ಟರ್ ತಂದಿದ್ದಾರೆ. ಇದೇ ವೇಳೆಗೆ ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಲಾರಿ, ಟ್ಯಾಕ್ಟರ್ ನೇರವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಎರಡು ತುಂಡಾಗಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪಿಎಸ್ಐ ಎಲ್.ಕೆ.ಜೂಲಕಟ್ಟಿ ಗಾಯಳುಗಳನ್ನ ಗ್ರಾಮಸ್ಥರ ನೆರವಿನೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.