ಧಾರವಾಡ: ಮುಲ್ಲಾ ಡಾಬಾ ಬಳಿ ಮರಕ್ಕೆ ಕ್ರೂಸರ್ ಡಿಕ್ಕಿ- ಗದಗ ಹುಡ್ಕೋ ಕಾಲನಿಯ ತಾಯಿ-ಮಗ ಸಾವು.. ಹಲವರಿಗೆ ಗಂಭೀರ ಗಾಯ…

ಧಾರವಾಡ: ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನ ಮತ್ತೂ ಬಾಳು ಮಾಮಾನ ದರ್ಶನ ಪಡೆದು ತಮ್ಮೂರಿಗೆ ಮರಳುತ್ತಿದ್ದ ಸಮಯದಲ್ಲಿ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಲಾ ಡಾಬಾದ ಬಳಿ ಸಂಭವಿಸಿದೆ.
ಘಟನೆಯಲ್ಲಿ ಗದಗ ಹುಡ್ಕೋ ಕಾಲನಿಯ 95 ವರ್ಷದ ಮಹಾಂತಮ್ಮ ಬಸವಣೆಪ್ಪ ತುಪ್ಪದ ಹಾಗೂ 52 ವರ್ಷದ ಸುರೇಶ ಬಸವಣೆಪ್ಪ ತುಪ್ಪದ ಸಾವಿಗೀಡಾಗಿದ್ದು, ಕ್ರೂಸರ್ ವಾಹನದಲ್ಲಿದ್ದ ಹತ್ತಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ದೌಡಾಯಿಸಿ, ಗಾಯಗೊಂಡವರನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.