ಮಧುರಾ ಕಾಲನಿಯ ಬಳಿ ನಡುರಸ್ತೆಯಲ್ಲೇ ಹೆಣವಾದ….!

ಹುಬ್ಬಳ್ಳಿ: ನಗರದ ಮಧುರಾ ಕಾಲನಿಯ ಬಳಿಯಿಂದ ಬೇರೆ ಊರಿಗೆ ಹೋಗುವುದಾಗಿ ಹೇಳಿ ಹೊರಟ ವ್ಯಕ್ತಿಯೋರ್ವ ಬೈಕ್ ನಿಂದ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.

ಗಣೇಶ ಪೇಟೆಯ ನಿವಾಸಿಯಾಗಿರುವ ಅಲೀಮ್ ಎಂಬಾತ ಮಧುರಾ ಕಾಲನಿಯ ಬಳಿ ಚಿಕನ್ ಸೆಂಟರ್ ನಡೆಸುತ್ತಿದ್ದ. ಮಧ್ಯಾಹ್ನ ಮನೆಯಿಂದ ಫೋನ್ ಬಂದ ಪರಿಣಾಮ, ಬೈಕಿನಲ್ಲಿ ಮನೆಗೆ ಹೋಗಿ, ಅಲ್ಲಿಂದ ಪರವೂರಿಗೆ ಹೋಗಲು ಹೊರಟಾಗ ದುರ್ಘಟನೆ ನಡೆದಿದೆ.
ಗೆಳೆಯರೊಂದಿಗೆ ಮಾತನಾಡುತ್ತ ನಿಂತು ಹೊರಟ ಕೆಲ ಸಮಯದಲ್ಲೇ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಹೆಲ್ಮೇಟ್ ಕೂಡಾ ಛಿದ್ರವಾಗಿದೆ. ಅಷ್ಟೇ ಅಲ್ಲ, ಬೈಕಿನ ಭಾಗ, ಎದೆಯ ಭಾಗಕ್ಕೆ ಬಡಿದು ತೀವ್ರ ಥರದ ಗಾಯಗಳಾಗಿ, ಸ್ಥಳದಲ್ಲಿಯೇ ಅಲೀಮ್ ಸಾವಿಗೀಡಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.