ಚಳಮಟ್ಟಿ ಬಳಿ ಪೊಲೀಸ್ ಸಾವಿಗೆ ಕಾರಣವಾಗಿದ್ದ “ರಾಕ್ಷಸ ಲಾರಿ” ವಶ…

ಹುಬ್ಬಳ್ಳಿ: ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರ ಮೇಲೆ ಲಾರಿ ಹಾಯಿಸಿ ಪರಾರಿಯಾಗಿದ್ದ ಆರೋಪಿಯನ್ನ ಲಾರಿಯ ಸಮೇತ ವಶಕ್ಕೆ ಪಡೆಯುವಲ್ಲಿ ತಡರಾತ್ರಿಯೇ ಯಶಸ್ವಿಯಾಗಿದ್ದಾರೆ.

ರಭಸವಾಗಿ ಮಳೆ ಬರುತ್ತಿದ್ದ ಸಮಯದಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು 112 ವಾಹನದಲ್ಲಿ ಹೋಗಿದ್ದ ಪೊಲೀಸರ ಮೇಲೆ ಲಾರಿ ಹಾಯಿಸಿ, ಪರಾರಿಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ಪೊಲೀಸರು ಸೇರಿದಂತೆ ಜಿಲ್ಲಾ ಪೊಲೀಸರು ಪ್ರತಿಯೊಂದು ಕಡೆಯೂ ನಾಕಾಬಂದಿ ಮಾಡಿ, ತನಿಖೆಯನ್ನ ಆರಂಭಿಸಿದ್ದರು.
ಸಧ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಲಾರಿಯಲ್ಲಿ ಚಾಲಕ ಹಾಗೂ ಮಾಲೀಕ ಇದ್ದರೆಂದು ಗೊತ್ತಾಗಿದ್ದು, ಪರಶು ವಾಲಿಕಾರ ಎಂಬುವವರ ಹೆಸರಿನಲ್ಲಿದೆ ಎಂದು ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.