ಬೈಕ್ ನಾಯಿಗೆ ಡಿಕ್ಕಿ- ಮಹಿಳೆ ಸಮೇತ ಶ್ವಾನದ ದುರ್ಮರಣ

ಧಾರವಾಡ: ಶಹರಕ್ಕೆ ಮನೆಗೆಲಸಕ್ಕಾಗಿ ಬರುತ್ತಿದ್ದ ಸಮಯದಲ್ಲಿ ಬೈಕ್ ನಾಯಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತ್ತಿದ್ದ ಮಹಿಳೆ ಮತ್ತು ಶ್ವಾನ ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಸಂಭವಿಸಿದೆ.
ಬೆನಕಟ್ಟಿ ಗ್ರಾಮದ 45 ವಯಸ್ಸಿನ ದಿಲಶಾದ್ ಬಿಸ್ಮಿಲ್ಲಾ ಚಪ್ಪರಬಂದ್ ಎಂಬ ಮಹಿಳೆ ಧಾರವಾಡದ ಸಂಪಿಗೆನಗರದಲ್ಲಿ ಮನೆಗೆಲಸ ಮಾಡಲು ಬರುವಾಗ, ಪರಿಚಯಸ್ಥರ ಬೈಕಿನಲ್ಲಿ ಬರುವಾಗ ದುರ್ಘಟನೆ ನಡೆದಿದೆ.
ಬೈಕು ಸಲಕಿನಕೊಪ್ಪದ ಬಳಿ ಬಂದಾಗ ಅಡ್ಡಲಾಗಿ ನಾಯಿಯೊಂದು ಓಡಿ ಬಂದಿದೆ. ಬೈಕ್ ಸವಾರ ನಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದೆ ಕುಳಿತ ಮಹಿಳೆ ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಶವವನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.