ಅರಬೈಲ್ ಬಳಿ ಭೀಕರ ಅಪಘಾತ- ಶಿಗ್ಗಾಂವ, ಸವಣೂರಿನ ಹತ್ತು ವ್ಯಾಪಾರಿಗಳ ದುರ್ಮರಣ… ಹಲವರ ಸ್ಥಿತಿ ಗಂಭೀರ…

ಹುಬ್ಬಳ್ಳಿ: ಸವಣೂರು- ಶಿಗ್ಗಾಂವಿಯಿಂದ ಹಣ್ಣು ತೆಗೆದುಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ಅರಬೈಲ್ ಬಳಿ ಪಲ್ಟಿಯಾದ ಪರಿಣಾಮ ಹತ್ತು ವ್ಯಾಪಾರಿಗಳು ಸಾವಿಗೀಡಾಗಿದ್ದು, ಇನ್ನೂ ಹತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ವೀಡಿಯೋ…
ಕುಮಟಾದಲ್ಲಿ ಇಂದು ಸಂತೆಯಿದ್ದ ಪರಿಣಾಮ ಹಣ್ಣಿನ ವ್ಯಾಪಾರ ಮಾಡಲು ತೆರಳುತ್ತಿದ್ದರು. ಮಿನಿಲಾರಿ ಪಲ್ಟಿಯಾಗಿದ್ದರಿಂದ ಅಲ್ಲಿಯೇ ಸಾವಾಗಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಗೆ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡವರನ್ನ ಕಿಮ್ಸಗೆ ತರಲಾಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.