ಕಲಘಟಗಿಯಲ್ಲಿ ಅಪಘಾತ: ನವಲಗುಂದ ಪುರಸಭೆ ಸಿಬ್ಬಂದಿ ದುರ್ಮರಣ- ಇನ್ನಿಬ್ಬರ ಸ್ಥಿತಿ ಗಂಭೀರ
1 min readಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ನಡೆದ ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾದ ಘಟನೆ ನಡೆದಿದೆ.
ನವಲಗುಂದ ಪುರಸಭೆಯ ಸಿಬ್ಬಂದಿಯಾಗಿರುವ ಮಲ್ಲೇಶಿ ಹರಿಜನ ಮೃತಪಟ್ಟಿದ್ದು, ಇವರ ಜೊತೆಗಿದ್ದ ಶರಣಯ್ಯ ಶಿವಯ್ಯ ಮಲಿಂಗನವರ ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ನವಲಗುಂದದಲ್ಲಿ ಕೆಲಸ ಮುಗಿಸಿಕೊಂಡು ಕಲಘಟಗಿ ವಿದ್ಯಾನಗರದಲ್ಲಿರುವ ತಮ್ಮ ಮನೆಗೆ ಬರುವಾಗ ಈ ಘಟನೆ ನಡೆದಿದೆ.
ಮಲ್ಲೇಶ ಹರಿಜನರಿಗೆ ಎದುರಾಗಿ ಬಂದ ಬೈಕಿನಲ್ಲಿದ್ದ ತುಮರಿಕೊಪ್ಪ ಗ್ರಾಮದ ಮಲ್ಲೇಶಿ ಶಿವಾನಂದ ಕಮ್ಮಾರ ಹಾಗೂ ಚೆನ್ನವೀರಯ್ಯ ಹಾರೂಗೇರಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ.
ಪ್ರಕರಣ ಕಲಘಟಗಿ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.