ಸಹೋದರರ ಜೊತೆ ಮರಳಿ ಬಾರದೂರಿಗೆ ಹೊರಟೋದ “ಐಎಎಸ್ ಮಹಾಂತೇಶ ಬೀಳಗಿ”…!!!
ಬೆಳಗಾವಿ: ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ನಾಲ್ವರ ಅಂತ್ಯಕ್ರಿಯೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದ ಜಮೀನಿನಲ್ಲಿ ನಡೆದ ಅಂತ್ಯಕ್ರಿಯೆ ನಡೆಯಿತು.
ಒಂದೇ ಕಡೆ ನಾಲ್ಕು ಜನರ ಅಂತ್ಯಸಂಸ್ಕಾರ ನಡೆದಿದ್ದು, ಮಹಾಂತೇಶ್ ಬೀಳಗಿ ಅಣ್ಣ ಸಿದ್ರಾಮಪ್ಪರಿಂದ ಅಗ್ನಿಸ್ಪರ್ಶ ನಡೆಯಿತು.
ಮಹಾಂತೇಶ ಬೀಳಗಿಯವರ ಜಮೀನಿನಲ್ಲಿ ಕುಟುಂಬಸ್ಥರ ಗೋಳಾಟದ ನಡುವೆ ನಾಲ್ಕು ಜನರ ಅಂತ್ಯಸಂಸ್ಕಾರ ನಡೆದಿದೆ. ಮಹಾಂತೇಶ್ ಬೀಳಗಿ, ಪಕ್ಕದಲ್ಲಿ ಶಂಕರ್ ಬೀಳಗಿ, ಈರಣ್ಣಾ ಬೀಳಗಿ, ಈರಣ್ಣಾ ಶಿರಸಂಗಿ ಅಂತ್ಯಕ್ರಿಯೆ ನಡೆಯಿತು.
