ನಿಶ್ಚಿತಾರ್ಥವಿದ್ದ ಗೆಳೆಯನ ಜೊತೆ ಹೊರಟಿದ್ದ ಬೈಕ್ ಡಿಕ್ಕಿ: ‘ಆತನೇ’ ಇಹಲೋಕ ತ್ಯಜಿಸಿದ

ಹುಬ್ಬಳ್ಳಿ: ನೇಕಾರನಗರದಿಂದ ಹಳೇಹುಬ್ಬಳ್ಳಿಯತ್ತ ಕಾರವಾರ ರಸ್ತೆಯ ಮೂಲಕ ಆಗಮಿಸುತ್ತಿದ್ದ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಅರವಿಂದನಗರದ ಬಳಿ ಸಂಭವಿಸಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಗೆ ಕಾರೊಂದು ಗುದ್ದಿಕೊಂಡು ಹೋದ ಪರಿಣಾಮವಾಗಿ ಅಬುಜರ ಬಿಜಾಪುರ ಸ್ಥಳದಲ್ಲಿಯೇ ಸಾವಿಗೀಡಾದ್ದು, ಈತನ ಜೊತೆಗಿದ್ದ ಆಮೀರ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೇ ಯುವಕನ ನಿಶ್ಚಿತಾರ್ಥ ಮೂರೇ ದಿನದಲ್ಲಿ ನಡೆಯುವುದಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಅರವಿಂದನಗರದ ಬಳಿ ಘಟನೆ ನಡೆದ ತಕ್ಷಣವೇ .ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಡಿಕ್ಕಿ ಹೊಡೆದು ಪರಾರಿಯಾದ ಕಾರಿನ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮೃತ ಯುವಕ ಅಬುಜರ ಬಿಜಾಪುರನ ಸಂಬಂಧಿಕರು ಕಿಮ್ಸ್ ಮುಂಭಾಗ ಜಮಾವಣೆಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿದೆ. ಇದರಿಂದ ವಿದ್ಯಾನಗರ ಠಾಣೆ ಪೊಲೀಸರು ಹೆಚ್ಚುವರಿ ಪೊಲೀಸರನ್ನ ಕಿಮ್ಸನತ್ತ ಕಳಿಸುತ್ತಿದ್ದಾರೆ.