ಹುಬ್ಬಳ್ಳಿ ಬಳಿ ಅಪಘಾತ ಸರಕಾರಿ ಶಾಲೆಯ ಸಹಶಿಕ್ಷಕ ದುರ್ಮರಣ…!!!
1 min readಹುಬ್ಬಳ್ಳಿ: ಸರಕಾರಿ ಶಾಲೆಯ ಶಿಕ್ಷಕರೋರ್ವರು ಸ್ಕೂಟಿಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ಸಂಭವಿಸಿದೆ.
40 ವರ್ಷದ ಶಾಂತವೀರಪ್ಪ ದಾನಪ್ಪನವರ ಎಂಬ ಶಿಕ್ಷಕರೇ ಸಾವಿಗೀಡಾಗಿದ್ದಾರೆ. ಮೂಲತಃ ಕುಂದಗೋಳ ತಾಲೂಕಿನ ತರ್ಲಘಟ್ಟ ನಿವಾಸಿಯಾಗಿದ್ದ ಶಾಂತವೀರಪ್ಪ ದಾನಪ್ಪನವರ, ಮಳಲಿಯಲ್ಲಿನ ಶಾಲೆಗೆ ಹೋಗುವಾಗ ಅಪಘಾತ ಸಂಭವಿಸಿದೆ.
ಕಲಘಟಗಿ ತಾಲೂಕಿನ ಕುರುವಿಕೊಪ್ಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಶಾಂತವೀರಪ್ಪ, ಇತ್ತೀಚಿಗೆ ಮಳಲಿ ಶಾಲೆಗೆ ವರ್ಗಾವಣೆಗೊಂಡಿದ್ದರು.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.