ಹುಬ್ಬಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: ಮೂವರ ಸಾವು, ಮತ್ತೋರ್ವ ಗಂಭೀರ

ಹುಬ್ಬಳ್ಳಿ: ತಾಲೂಕಿನ ಶೆರೇವಾಡ ಬಳಿಯಿರುವ ಟೋಲ್ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಸಂಭವಿಸಿದೆ.

ಕುಂದಗೋಳದಿಂದ ನೂಲ್ವಿ ಗ್ರಾಮದತ್ತ ಬರುತ್ತಿದ್ದ ಬೈಕಿಗೆ ಎದುರಿಗೆ ಬಂದ ಬೈಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ, ಸ್ಥಳದಲ್ಲಿಯೇ ಮೂವರು ಪ್ರಾಣವನ್ನ ಬಿಟ್ಟಿದ್ದು, ಮತ್ತೋರ್ವನನ್ನ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ.

ಅತೀಯಾದ ವೇಗವಾಗಿ ಬೈಕುಗಳನ್ನ ಚಲಾಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭಿವಿಸದೆ. ಅಪಘಾತದ ರಭಸ ಎಷ್ಟಿತ್ತೆಂದರೇ, ನಾಲ್ವರು ನಾಲ್ಕು ದಿಕ್ಕಿನಲ್ಲಿ ಬಿದ್ದಿದ್ದಾರೆ. ಬೈಕುಗಳ ಪೂರ್ಣವಾಗಿ ಜಖಂಗೊಂಡಿವೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಕಿಮ್ಸಗೆ ರವಾನೆ ಮಾಡಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಘಟನೆಯಲ್ಲಿದ್ದವರ ಪೂರ್ಣವಾದ ಹೆಸರು ಇನ್ನೂ ಲಭ್ಯವಾಗಿಲ್ಲ.