ದೇಸಾಯಿ ಸರ್ಕಲ್ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ…!

ಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶವಾದ ದೇಸಾಯಿ ಸರ್ಕಲ್ ಬಳಿಯೇ ಸರಣಿ ಅಪಘಾತವಾಗಿದ್ದು, ಮಾರುತಿ ಓಮಿನಿಯೊಂದು ಸ್ಕೂಟಿಗೆ ಹೊಡೆದು, ರಾಂಗ್ ರೂಟ್ ಲ್ಲಿ ಬರುತ್ತಿದ್ದ ಆಟೋರಿಕ್ಷಾಗೂ ಡಿಕ್ಕಿ ಹೊಡೆದ ಪರಿಣಾಮ, ಆಟೋ ಪಲ್ಟಿಯಾಗಿ, ಸ್ಕೂಟಿ ಎರಡು ವಾಹನದ ನಡುವೆ ಸಿಕ್ಕು, ಸವಾರನಿಗೆ ತೀವ್ರ ಥರದ ಗಾಯಗಳಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಕೋರ್ಟ ಸರ್ಕಲ್ ಬಳಿಯಿಂದ ಕೇಶ್ವಾಪುರದತ್ತ ಹೊರಟಿದ್ದ ಮಾರುತಿ ಓಮಿನಿ ಮೊದಲು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಅರಿಹಂತದಲ್ಲಿ ಕಾರ್ಯನಿರ್ವಹಿಸುವ ರಾಜೇಶ ಎಂಬಾತ ಕೆಳಗೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ರಾಂಗ್ ರೂಟಲ್ಲಿ ಬಂದ್ ಆಟೋ ಚಾಲಕ ಮಂಜುಪ್ಪ ಕರಲಳ್ಳಿಗೂ ಓಮಿನಿ ಡಿಕ್ಕಿ ಹೊಡೆದಿದೆ. ಇದರಿಂದ ಆಟೋ ಪಲ್ಟಿಯಾಗಿದೆ.

ಜಗದೀಶ ಖಂಡೇಲವಾಲ್ ಎಂಬವವರಿಗೆ ಸೇರಿದ ಮಾರುತಿ ಓಮಿನಿ ಕಾರನ್ನ ಚಲಾಯಿಸುತ್ತಿದ್ದ ಹೈದ್ರಾಬಾದ್ ಮೂಲದ ವಿಕ್ಕಿ ಎರಡು ವಾಹನಗಳಿಗೂ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ಸವಾರನಿಗೆ ತೀವ್ರ ಥರದ ಗಾಯಗಳಾಗಿದ್ದು, ಪಲ್ಟಿಯಾದ ಆಟೋ ಚಾಲಕ ಮಂಜಪ್ಪ ಕರಲಳ್ಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯ ನಡೆಯುತ್ತಿದ್ದ ಹಾಗೇ ರಸ್ತೆಯಲ್ಲಿ ಸಂಪೂರ್ಣವಾಗಿ ಗೊಂದಲ ಸೃಷ್ಟಿಯಾಗಿತ್ತು. ರಸ್ತೆ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು. ಗಾಯಾಳುವನ್ನ ಸ್ಥಳೀಯರು, ಪಕ್ಕದಲ್ಲಿ ಎತ್ತಿ ಹಾಕಿ ಉಪಚರಿಸಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ, ಸಂಚಾರವನ್ನ ಸುಗಮಗೊಳಿಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.