ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರ ಸಾವು…!
ಹುಬ್ಬಳ್ಳಿ: ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜ್ ಬಳಿಯಲ್ಲಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಂಭವಿಸಿದೆ.

ಮೃತರನ್ನ ಹುಬ್ಬಳ್ಳಿ ಯಲ್ಲಾಪುರ ಓಣಿಯ ರಾಜಾಸಾಬ ಮುಲ್ಲಾ, ಖಾಜಾಸಾಬ ಮುಲ್ಲಾ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.