ಹುಬ್ಬಳ್ಳಿ ಬಳಿ ನಡೆದ “ಭೀಕರ” ಘಟನೆಯಲ್ಲಿ ಆತ ಉಸಿರು ಬಿಟ್ಟಿದ್ದು ಎಲ್ಲಿ ಗೊತ್ತಾ..? ಎಕ್ಸಕ್ಲೂಸಿವ್ ವೀಡಿಯೋ
ಹುಬ್ಬಳ್ಳಿ: ಗಬ್ಬೂರ ಬೈಪಾಸ್ ಬಳಿ ಮಾರುತಿ ಓಮಿನಿಯಾತ ಡೊರ್ ತೆಗೆದ ಪರಿಣಾಮ ಯುವಕನೋರ್ವ ಬೈಕಿನಿಂದ ಕಬ್ಬಿಣದ ರಾಡ್ ಗೆ ಬಡಿದು ಹೋಗಿ ಆಳವಾದ ಗುಂಡಿಯಲ್ಲಿ ಬಿದ್ದು ಪ್ರಾಣವನ್ನ ಕಳೆದುಕೊಂಡಿದ್ದಾನೆ.
ಬಹುತೇಕರು ತಾವು ಕಾರಲ್ಲಿ ಹೋಗುತ್ತಿದ್ದೇವೆ ಎಂದುಕೊಂಡು ಹಿಂದೆ- ಮುಂದೆ ನೋಡುವುದೇ ಇಲ್ಲಾ. ಹಾಗಾಗಿಯೇ, ಇಂತಹ ಅವಘಡ ಸಂಭವಿಸುತ್ತವೆ. ಗಬ್ಬೂರಿನ ಅಬ್ದುಲ್ ರಜಾಕ್ ಅಮೀನಸಾಬನವರ ಎಂಬ ಯುವಕ ಬೈಕಿನಲ್ಲಿ ಹೋಗುತ್ತಿದ್ದಾಗ ಅಹಿತಕರ ಘಟನೆ ನಡೆದಿದೆ.
ಓಮಿನ್ ಯ ಡೋರ್ ತೆಗೆದ ಪರಿಣಾಮ ಬೈಕಿನಲ್ಲಿ ಹೊರಟಿದ್ದ ಯುವಕ ಆಯತಪ್ಪಿ ಕಬ್ಬಿಣದ ಸರಳಿಗೆ ಬಡಿದು, ಪಕ್ಕದಲಿದ್ದ ಗುಂಡಿಯಲ್ಲಿ ಬಿದ್ದು ಪ್ರಾಣವನ್ನ ಬಿಟ್ಟಿದ್ದಾನೆ.
ರಜಾಕ್ ಬಿದ್ದಿದ್ದನ್ನ ನೋಡದಿ ಕೆಲವರು ಓಡಿ ಬಂದು ಮೇಲ್ಲೆತ್ತುವಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆಗಲೇ ಅಲ್ಲಿದ್ದವರು ಈತನ ಗುರುತು ಹಿಡಿದಿದ್ದಾರೆ. ಇದೀಗ ಈ ದೃಶ್ಯಗಳು ವೈರಲ್ ಆಗಿವೆ.