ಮರಳು ಟಿಪ್ಪರ್ ಅಪಘಾತ ಒಂದೇ ಕುಟುಂಬದ ನಾಲ್ವರ ದುರ್ಮರಣ…!

ಹಾವೇರಿ: ಅಕ್ರಮ ಮರಳು ಸಾಗಾಟದ ಟಿಪ್ಪರಗಳ ಹಾವಳಿಯಿಂದ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲೂಕಿನ ಮುದೆನೂರು ಗ್ರಾಮದ ಬಳಿ ಸಂಭವಿಸಿದೆ.

ಮುದೆನೂರು ಗ್ರಾಮದ ಸಿದ್ದಪ್ಪ ಹನಮಂತಪ್ಪ ನಾಗೇನಹಳ್ಳಿ ಎಂಬುವವರು ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮರಳು ತುಂಬಿದ ಟಿಪ್ಪರವೊಂದು ಡಿಕ್ಕಿ, ಹೊಡೆದಿದ್ದು ನಾಲ್ವರ ದೇಹಗಳು ಛಿದ್ರ ಛಿದ್ರವಾಗಿವೆ.

ಬೈಕಿಗೆ ಡಿಕ್ಕಿ ಹೊಡೆದಿರುವ ಮರಳು ತುಂಬಿದ ಟಿಪ್ಪರ್ ತದನಂತರ ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಟಿಪ್ಪರ್ ಚಾಲಕನ ಪತ್ತೆಗಾಗಿ ಜಾಲ ಬೀಸಿದ್ದಾರೆ.