ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ “ಪತಿ,ಪತ್ನಿ,ಮಗು”ವನ್ನ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಶಾಸಕ ಶ್ರೀನಿವಾಸ ಮಾನೆ…

ಹಾವೇರಿ: ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದ ವೇಳೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದು ನರಳಾಡುತ್ತಿದ್ದ ಮಗುವಿನ ಸಮೇತ ಕುಟುಂಬವನ್ನ ತಮ್ಮದೇ ಕಾರಿನಲ್ಲಿ ತೆಗೆದುಕೊಂಡು ಹೋದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಶಿರಗೋಡ್ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದರು ಗಂಭೀರ ಗಾಯಗೊಂಡಿದ್ದರು.ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಹಾನಗಲ್ ಶಾಸಕ ಶ್ರೀನಿವಾಸ ಮಾನೆಯವರು ತಕ್ಷಣವೇ ಜಾಗೃತರಾಗಿ ಆಸ್ಪತ್ರೆಗೆ ರವಾನೆ ಮಾಡಿದರು.
ಅಳುತ್ತಲೇ ಕೂತ ಮಹಿಳೆಯು ಶಾಸಕರು ಮಾಡಿದ ಸಹಾಯವನ್ನ ನೆನೆದಿರುವ ವೀಡಿಯೋ ವೈರಲ್ ಆಗಿದೆ.
ಪಕ್ಕೀರಪ್ಪ ಕಳ್ಳಿಹಾಳ 42 ವರ್ಷ, ಜಯಪೂರ್ಣ 38 ವರ್ಷದ ಪತ್ನಿ ಹಾಗೂ ಗೌತಮ್ 3 ವರ್ಷದ ಮಗುವಿನ ಗಾಯವಾಗಿತ್ತು. ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ ತಾಲ್ಲೂಕಿನ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಿರುವ ಶಾಸಕರ ಕಾರ್ಯ ಮೆಚ್ಚುಗೆಗೆ ಕಾರಣವಾಗಿದೆ.