ಧಾರವಾಡದಲ್ಲಿ ಗ್ಯಾಸ್ ಲಾರಿಗೆ ಈರುಳ್ಳಿ ತುಂಬಿದ ಲಾರಿ ಡಿಕ್ಕಿ- ಓರ್ವ ಸಾವು, ಮತ್ತಿಬ್ಬರಿಗೆ ಗಾಯ…!

ಧಾರವಾಡ: ಪೂನಾದಿಂದ ಬರುತ್ತಿದ್ದ ಈರುಳ್ಳಿ ತುಂಬಿದ ಲಾರಿಯು ಖಾಲಿ ಗ್ಯಾಸ್ ಹೇರಿಕೊಂಡು ಸವದತ್ತಿ ರಸ್ತೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಗ್ಯಾಸ್ ಲಾರಿಯ ಚಾಲಕ ಸ್ಥಳದಲ್ಲಿ ಸಾವಿಗೀಡಾಗಿ, ಮತ್ತಿಬ್ಬರು ಗಾಯಗೊಂಡ ಘಟನೆ ಬೆಳಗಿನ ಜಾವ ನಾಲ್ಕು ಗಂಟೆಗೆ ಧಾರವಾಡದ ಓಲ್ಡ್ ಡಿಎಸ್ಪಿ ಕ್ರಾಸ್ ನಲ್ಲಿ ಸಂಭವಿಸಿದೆ.

ಮೂಲತಃ ಹಿರೇಕುಂಬಿಯ ಮೋನಯ್ಯ ಗವಿಶಿದ್ದಯ್ಯ ಅಮೋಘಿಮಠ ಎಂಬುವವರು ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನುಳಿದಂತೆ ಬಾಬು ಮಹ್ಮದ ಮುಲ್ಲಾ, ಅಭಿಷೇಕ ಹಿತ್ತಲಮನಿ ಹಾಗೂ ಅರ್ಬಾಜ್ ಶೇಖ ಗಾಯಗೊಂಡಿದ್ದಾರೆ.

ಈರುಳ್ಳಿ ಲಾರಿ ಮತ್ತು ಗ್ಯಾಸ್ ಲಾರಿ ವೇಗವಾಗಿ ಬಂದ ಪರಿಣಾಮ ನಿಯಂತ್ರಣ ಸಿಗದೇ ಡಿಕ್ಕಿ ಸಂಭವಿಸಿದೆ. ಲಾರಿಯ ಕೆಳಗೆ ಮೃತ ವ್ತಕ್ತಿಯ ದೇಹ ಸಿಕ್ಕಿದ್ದು ಪೊಲೀಸರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನ ಆಸ್ಪತ್ರೆ ಶವಾಗಾರಗೆ ಸಾಗಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.