ಕಲಘಟಗಿ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ- ಸರಕಾರಿ ಶಾಲೆಯ ಶಿಕ್ಷಕಿ ಸ್ಥಳದಲ್ಲಿ ಸಾವು…!!!
ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಹಾಗೂ ಲಾರಿ ಮದ್ಯ ಭೀಕರ ಅಘಾತ ಸಂಭವಿಸಿದ್ದು, ಘಟನೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯೋರ್ವರು ಸಾವಿಗೀಡಾಗಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ದೂಳಿಕೊಪ್ಪ ಗ್ರಾಮದಿಂದ ಶಾಲೆ ಮುಗಿಸಿಕೊಂಡು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಧಾರವಾಡದ ಶುಕ್ರವಾರಪೇಟೆ ನವಲೂರ ಅಗಸಿಯ ಶಿಕ್ಷಕಿ ಗಿರಿಜಾ ಸದಾಶಿವ ತುರಮರಿಮಠ ಎಂಬುವವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ತಕ್ಷಣ ಧಾವಿಸಿದ ಹಿರೇಹೊನ್ನಳ್ಳಿ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಕಲಘಟಗಿ ಹಾಗೂ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿ ಇದಾಗಿದ್ದು ಈ ರಸ್ತೆಯಲ್ಲಿ ನಾಮಫಲಕಗಳು ಹಾಗೂ ಸ್ಪೀಡ್ ಬ್ರೇಕರ್ ಇಲ್ಲದೆ ಇರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಕೂಡಲೆ ಅವುಗಳನ್ನು ಕೂಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಲಘಟಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
