Posts Slider

Karnataka Voice

Latest Kannada News

ಸಲಕಿನಕೊಪ್ಪ: ಗಿಳಿಯು ಪಂಜರದೊಳಿಲ್, ರಾಮಾ… ರಾಮಾ…

1 min read
Spread the love

ಧಾರವಾಡ: ದೂರದ ಮುಧೋಳದಿಂದ ಹಳಿಯಾಳಕ್ಕೆ ಹೊರಟಿದ್ದ ಟೆಂಪೋದಲ್ಲಿದ್ದವರು, ಟೀ ಸೇವನೆಗಾಗಿ ವಾಹನ ನಿಲ್ಲಿಸಿದಾಗ, ಓವರ್‌ಟೇಕ್ ಮಾಡಿ ಬಂದ ಸಾರಿಗೆ ಸಂಸ್ಥೆಯ ಬಸ್ಸೊಂದು ಬಾಲಕಿನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವಿಗೀಡಾದ ಘಟನೆ ಸಂಭವಿಸಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬದವರ ಜೊತೆ ಹೊರಟಿದ್ದ ಮೊಹ್ಮದ ಎಂಬ ಬಾಲಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ, ಓವರ್‌ಟೇಕ್ ಮಾಡುತ್ತಿದ್ದ ಸಮಯದಲ್ಲಿ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆತನ ತಲೆಗೆ ತೀವ್ರವಾಗಿ ಪೆಟ್ಟಾಗಿ ಸಾವಿಗೀಡಾಗಿದ್ದಾನೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *