“ಸಿನಿಮೀಯ ಸ್ಟೈಲ್” ಭೀಕರ ಅಪಘಾತ: ಬೆಚ್ಚಿ ಬೀಳಿಸತ್ತೆ ಸಿಸಿಟಿವಿ ದೃಶ್ಯಾವಳಿಗಳು…

ಇಂತಹ ದೃಶ್ಯವನ್ನ ನೀವೂ ಎಂದೂ ನೋಡಿರಲೂ ಸಾಧ್ಯವೇ ಇಲ್ಲ..
ಅಪಘಾತದ ರಭಸಕ್ಕೆ 15 ಹಾರಿದ ವಿದ್ಯಾರ್ಥಿನಿ..
ರಾಯಚೂರು: ಸಿನಿಮಯ ಸ್ಟೈಲ್ ನಲ್ಲಿ ಭೀಕರ ಅಪಘಾತವಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ಎಲ್ಲರನ್ನ ಬೆಚ್ಚಿ ಬೀಳಸತ್ತೆ.
ವೀಡಿಯೋ… (ಭಯಗೊಳ್ಳುವವರು ನೋಡಬೇಡಿ)
ರಾಯಚೂರು ನಗರದ ಶ್ರೀ ರಾಮ ಮಂದಿರ ರಸ್ತೆಯಲ್ಲಿ ಬೈಕ್ ಸವಾರ ಮಾಡಿದ ಎಡವಟ್ಟಿಗೆ ಭೀಕರ ಅಪಘಾತ ಸಂಭವಿಸಿದೆ. ಏಕಾಏಕಿ ಯೂ ಟರ್ನ್ ತೆಗೆದುಕೊಳ್ಳಲು ಬೈಕ್ ಸವಾರ ಮುಂದಾದಾಗ ಈ ವೇಳೆ ವೇಗದಲ್ಲಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ.
ಮೊದಲು ಬೈಕ್ ಗೆ ಡಿಕ್ಕಿ ಹೊಡೆದ ಕಾರು, ಬಳಿಕ ರಸ್ತೆ ಪಕ್ಕದಲ್ಲಿ ಹೊರಟಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದು, ಕಾರ್ ಡಿಕ್ಕಿ ರಭಸಕ್ಕೆ 15ಅಡಿ ಮೇಲೆ ಹಾರಿ ಬಿದ್ದಿದ್ದಾರೆ.
ವಿದ್ಯಾರ್ಥಿನಿಯರಾದ ಭೂಮನಗುಂಡ ನಿವಾಸಿ ಶುಭಲಿಂಗಮ್ಮ, ಬೇವಿನಹಾಳದ ನಿವಾಸಿ ಜ್ಯೋತಿ ಹಾಗೂ ಬೈಕ್ ಸವಾರ ಶಿವರಾಜ್ ಪಾಟೀಲ್ ಗೂ ಗಂಭೀರ ಗಾಯಗಳಾಗಿವೆ.
ರಾಯಚೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.