ಬಂಡಿವಾಡ ಬಳಿ ರಸ್ತೆ ಅಪಘಾತ ಇಬ್ಬರ ಸ್ಥಿತಿ ಗಂಭೀರ, ಮತ್ತೋರ್ವ ಪ್ರಾಣಾಪಾಯದಿಂದ ಪಾರು..!

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಗ್ರಾಮದ ಪುಟಾಣಿ ಮಿಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗದಗ ಕಡೆಗೆ ಹೊರಟಿದ್ದ ಕಾರು ಹುಬ್ಬಳ್ಳಿಯತ್ತ ಬರುತ್ತಿದ್ದ ಎರಡು ಬೈಕುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಂಡಿವಾಡ ಗ್ರಾಮದ ವಿರುಪಾಕ್ಷಪ್ಪ ವಾಲಿ, ಹಿಂಬದಿ ಸವಾರ ಮಲ್ಲಪ್ಪ ಸುಣಗಾರ ಹಾಗೂ ಹುಬ್ಬಳ್ಳಿಯ ಮತ್ತೊಂದು ಬೈಕ್ ಸವಾರ ಮುಗಲಿಂದರ ಶರ್ಮಾ ಗಾಯಗೊಂಡಿದ್ದಾರೆ.
ಇದರಲ್ಲಿ ಇಬ್ಬರಿಗೆ ತಲೆಗೆ ಪೆಟ್ಟಾಗಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ. ಗದಗ ಮೂಲದ ಭಗೀರಥ ಹನಮಂತ ಮಗ್ಗಿ ಎಂಬಾತನೇ ಕಾರು ಚಾಲಕನಾಗಿದ್ದು, ಮೂರು ವಾಹಗನಗಳು ನಜ್ಜುಗುಜ್ಜಾಗಿವೆ.
ಘಟನೆಯಿಂದ ವಾಹನಗಳು ಎಲ್ಲೇಂದರಲ್ಲಿ ಬೀಳುವ ಜೊತೆಗೆ ಗಾಯಾಳುಗಳು ರಸ್ತೆಯ ಎಲ್ಲೆಂದರಲ್ಲಿ ಬಿದ್ದಿದ್ದರು. ದಾರಿಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದರು.