ಹುಬ್ಬಳ್ಳಿಯ ‘ಯಮದಾರಿ’ ಒಂದೇ ದಿನ ಮೂರು ಅಪಘಾತ: ಮೂರು ಸಾವು, ಎಂಟು ಜನರ ಸ್ಥಿತಿ ‘ಅಷ್ಟಕಷ್ಟೇ’…

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಇಂದು ಮೂರು ಅಪಘಾತಗಳು ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ತಾರಿಹಾಳ ಪ್ರದೇಶದಲ್ಲಿ ಹಳೇಹುಬ್ಬಳ್ಳಿಯಿಂದ ಉಳವಿಯ ಶ್ರೀ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಹೊರಟಿದ್ದ ಬಾಡಿಗೆ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಕಾರು ಚಾಲಕ ಸಾವಿಗೀಡಾಗಿದ್ದು, ಅದರಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಲ್ಲಿ ಶರಣಪ್ಪ ಅಂಗಡಿ ಎಂಬಾತ ಸಾವಿಗೀಡಾಗಿದ್ದು, ಪುಟ್ಟಯ್ಯ, ಅಮೂಲ್ಯ, ಅನುಶ್ರೀ, ಅನೂಪ ಹಾಗೂ ರೇಖಾ ಗಾಯಗೊಂಡಿದ್ದರು. ಮತ್ತೊಂದು ಬೈಕ್ ಲಾರಿ ಪ್ರಕರಣ ಇಟಿಗಟ್ಟಿ ಬಳಿ ನಡೆದಿದ್ದು, ಅದರಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು, ಮತ್ತೋರ್ವನ ಕಾಲು ಮುರಿದು ಕಿಮ್ಸ್ ಸೇರಿದ್ದಾನೆ.

ಗಬ್ಬೂರು ಬೈಪಾಸ್ ಬಳಿಯಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದು, ಇಬ್ಬರು ಯುವಕರಿಗೆ ಮಾರಣಾಂತಿಕವಾಗಿ ಗಾಯವಾಗಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.