ಹೊತ್ತಿ ಉರಿದ ಬೈಕ್ ಗಳು: ರಸ್ತೆಯಲ್ಲಿ ಮೂರು ಹೆಣ- ಅಪಘಾತವೋ.. ಸಂಚೋ..?
ವಿಜಯಪುರ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಗಳು ಹೊತ್ತಿ ಉರಿದು ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿಯ ದಿಂಡವಾರ ರಸ್ತೆಯಲ್ಲಿ ನಡೆದಿದೆ.
ಕುಮಾರ್ ಸೇರಿದಂತೆ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ. ಮತ್ತೋಬ್ಬ ಸವಾರನ ಸ್ಥಿತಿ ಕೂಡಾ ಚಿಂತಾಜನಕವಾಗಿದೆ. ಕಲಬುರ್ಗಿ ಜಿಲ್ಲೆಯ ಅಪ್ಜಲಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದ ಯುವಕರು ಮತ್ತೊಂದೆಡೆ, ಸ್ಥಳೀಯವಾಗಿ ಹೋಗುತ್ತಿರುವ ಬೈಕ್ ಗಳ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದ್ದು, ಆದ್ರೇ, ಸ್ಥಳದಲ್ಲಿ ಜಖಂ ಆಗಿ ನಿಂತ ಇನ್ನೆರೆಡು ಬೈಕ್ ಗಳಿಂದ ಅನುಮಾನ ಹುಟ್ಟಿಸುವಂತಾಗಿದೆ.
ವೇಗವಾಗಿ ಬಂದು ಬೈಕ್‌ಗಳು ಡಿಕ್ಕಿ ಹೊಡೆದರು ಸತ್ತವರಿಗೆ ಕೇವಲ ತಲೆಗೆ ಗಾಯಗಳಾಗಿವೆ. ಮೈ ಮೇಲೆ ಒಂಚೂರು ಗಾಯಗಳಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಉಳಿದ ಎರಡು ಬೈಕ್ ಗಳ ಸವಾರರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.