ನಸೆಯಲ್ಲಿ ಕಾರು ಪಲ್ಟಿ ಮಾಡಿಕೊಂಡ ಸಹೋದರರು…
ಧಾರವಾಡ: ಕುಡಿದ ಅಮಲಿನಲ್ಲಿದ್ದ ಸಹೋದರರಿಬ್ಬರು ನಸೆಯಲ್ಲಿ ಕಾರನ್ನ ಯದ್ವಾತದ್ವಾ ಚಲಾಯಿಸಿ ಪಲ್ಟಿ ಮಾಡಿರುವ ಘಟನೆ ರಾಯಾಪುರ ಬಳಿಯ ಬೆಲ್ಲದ ಶೋರೂಂ ಬಳಿ ಸಂಭವಿಸಿದೆ.

ನವನಗರದಿಂದ ಧಾರವಾಡ ವಿದ್ಯಾಗಿರಿಗೆ ಹೋಗುತ್ತಿದ್ದ ಕಾರಿನಲ್ಲಿದ್ದ ಶ್ರೇಯಸ್ ಬಸವರಾಜ ಚಿಕ್ಕೊಂದ ಹಾಗೂ ಆದಿತ್ಯ ಹೇಮಂತ ಚಿಕ್ಕೊಂದ ಕಾರನ್ನ ಮೊದಲು ಪುಟ್ ಪಾತ್ ಮೇಲೆ ಹತ್ತಿಸಿದ್ದಾರೆ. ಅದನ್ನ ತಪ್ಪಿಸಲು ಹೋಗಿ ಬ್ಯಾರಿಕೇಡಗೆ ಡಿಕ್ಕಿ ಹೊಡೆದಿದ್ದಾರೆ. ಮತ್ತೆ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರು ಪಲ್ಟಿಯಾಗಿದೆ.

ಕಾರು ಪಲ್ಟಿಯಾದ ಕೆಲವೇ ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಸಹೋದರರನ್ನ ಹೊರಗೆ ತೆಗೆದಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
