ಧಾರವಾಡದ ಶಿವಳ್ಳಿ ಬಳಿ ಭೀಕರ ಅಪಘಾತ: 20ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ…

ಧಾರವಾಡ: ನವಲಗುಂದದಿಂದ ಪಟಾಕಿ ತೆಗೆದುಕೊಂಡು ಧಾರವಾಡಕ್ಕೆ ಹೊರಟಿದ್ದ ಬೈಕ್, ಎದುರಿಗೆ ಬರುತ್ತಿದ್ದ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಧಾರವಾಡದ ಶಿವಾಜಿ ಸರ್ಕಲ್ ಬಳಿಯ ಪ್ರದೇಶದ ನಿವಾಸಿಗಳು ಬೈಕಿನಲ್ಲಿ ಹೋಗುತ್ತಿದ್ದರು. ಕುಡಿದ ಮತ್ತಿನಲ್ಲಿ ಇಬ್ಬರು ಹೊರಟಾಗ, ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕ್ರೂಸರ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿದ್ದು, ಅವರೆಲ್ಲರೂ ನವಲಗುಂದ ತಾಲೂಕಿನ ಹನಸಿ, ಹೆಬ್ಬಾಳ ಹಾಗೂ ಬ್ಯಾಲ್ಯಾಳದವರೆಂದು ಗೊತ್ತಾಗಿದೆ.
ಸ್ಥಳಕ್ಕೆ ಶಿವಳ್ಳಿ, ಮಾರಡಗಿ ಗ್ರಾಮದ ಕೆಲವರು ತೆರಳಿ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.