ಅಪಘಾತದಲ್ಲಿ ಸಾವಿಗೀಡಾದ ಪೊಲೀಸ್, ಕಾಲು ಮುರಿದುಕೊಂಡ ಮಹಿಳಾ ಪೊಲೀಸ್- ಅವರಿಬ್ಬರ ಡಿಟೇಲ್ಸ್…

ಧಾರವಾಡ: ನಗರದ ಹೊರವಲಯದಲ್ಲಿ ನಡೆದಿರುವ ಭೀಕರ ಅಪಘಾತದಲ್ಲಿ ಸಾವಿಗೀಡಾದ ಪೊಲೀಸ್ ಹಾಗೂ ತೀವ್ರ ಗಾಯಗೊಂಡಿರುವ ಮಹಿಳಾ ಪೊಲೀಸ್‌ರ ಮಾಹಿತಿ ಕರ್ನಾಟಕವಾಯ್ಸ್. ಕಾಂಗೆ ಲಭಿಸಿದೆ.
ಬೈಕಿನಲ್ಲಿ ಛಬ್ಬಿ ಬಂದೋಬಸ್ತ್ ಮುಗಿಸಿಕೊಂಡು ಬರುತ್ತಿದ್ದ ವೇಳೆಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಸಾವಿಗೀಡಾದ ಪೊಲೀಸ್ ಹುಚ್ಚೇಶ ಹಿರೇಗೌಡರ ಮೂಲತಃ ಬಾಗಲಕೋಟೆ ಗುಳೇದಗುಡ್ಡದವರು. 2021 ಬ್ಯಾಚಿನ ಶಿಸ್ತಿನ ಪೊಲೀಸ್, ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಲಕ್ಷ್ಮೀ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿಯವರು. 2019 ಬ್ಯಾಚಿನ ಲಕ್ಷ್ಮೀ ಅವರು, ಸಾಕಷ್ಟು ಜಾಣಾಕ್ಷರಿದ್ದರು. ಈ ಘಟನೆಯಿಂದ ಗರಗ ಪೊಲೀಸ್ ಠಾಣೆಯಲ್ಲಿ ನೀರವ ಮೌನ ಆವರಿಸಿದ್ದು, ಅಧಿಕಾರಿಗಳು ಧಾರವಾಡದ ಖಾಸಗಿ ಆಸ್ಪತ್ರೆಗೆ ತೆರಳಿ, ಲಕ್ಷ್ಮೀ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.