ಬಂಡಿವಾಡ ಬಳಿ ಟಂಟಂ ಪಲ್ಟಿ- ಬಾಲಕನ ಸ್ಥಿತಿ ಗಂಭೀರ, ಮೂವರು ಪಾರು

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಗ್ರಾಮದ ಬಳಿಯಲ್ಲಿ ಬೈಕ್ ತಪ್ಪಿಸಲು ಹೋದ ಟಂಟಂ ವಾಹನಕ್ಕೆ ಹಿಂದಿನಿಂದ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ, ಟಂಟಂ ಪಲ್ಟಿಯಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಬಿಡನಾಳದಿಂದ ಮುಳಗುಂದ ದಾವಲ್ ಮಲೀಕ ದರ್ಗಾಗೆ ಹೊರಟಿದ್ದ ಟಂಟಂ ವಾಹನ, ಬಂಡಿವಾಡ ಬಳಿ ಎದುರಿಗೆ ಬಂದ ಬೈಕನನ್ನ ತಪ್ಪಿಸಲು ಹೋಗಿದ್ದಾರೆ. ತಕ್ಷಣವೇ ಹಿಂದಿನಿಂದ ಹುಬ್ಬಳ್ಳಿ ಗಿರಣಿಚಾಳದ 407 ಪ್ಯಾಸೆಂಜರ್ ಟೆಂಪೋ ಡಿಕ್ಕಿ ಹೊಡೆದಿದೆ. ಇದರಿಂದ ಟಂಟಂ ಪಲ್ಟಿಯಾಗಿದೆ.

ವಾಹನದಲ್ಲಿ ರಫೀಕ ಕಾಲೆಬುಡ್ಡೆ ಎಂಬ ಬಾಲಕನಿಗೆ ತೀವ್ರ ಥರದ ಗಾಯಗಳಾಗಿದ್ದು, ಟಂಟಂ ಚಾಲಕ ಅಬ್ದುಲಸಾಬ ಕಾಲೆಬುಡ್ಡೆ ಹಾಗೂ ಆತನ ಜೊತೆಗಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ಯಾಸೆಂಜರ್ ಟೆಂಪೋ ಹುಬ್ಬಳ್ಳಿಯಿಂದ ಹೂವಿನಹಡಗಲಿಗೆ ಹೋಗುತ್ತಿದ್ದ ಸಮಯದಲ್ಲಿ ವೇಗವಾಗಿ ಚಲಾಯಿಸುತ್ತ ಬರುತ್ತಿದ್ದರಿಂದಲೇ ಈ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿಯನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಗೆ ನೀಡಿದ್ದು, ಪೊಲೀಸರು ದೌಡಾಯಿಸುತ್ತಿದ್ದಾರೆ.