Posts Slider

Karnataka Voice

Latest Kannada News

ಸತ್ತೂರ ಬಳಿ ಸಿಗ್ನಲ್ ಕಂಬಕ್ಕೆ ಡಿಕ್ಕಿ: ಸವಾರನ ದುರ್ಮರಣ…!

1 min read
Spread the love

ಧಾರವಾಡ: ಸತ್ತೂರ ಗ್ರಾಮದ ವ್ಯಕ್ತಿಯೋರ್ವ ಊಟ ಮಾಡಿ ಮರಳಿ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಿಗ್ನಲ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಸತ್ತೂರ ಬಳಿ ಸಂಭವಿಸಿದೆ.

ಮೃತ ವ್ಯಕ್ತಿ

ಸತ್ತೂರು ಗ್ರಾಮದ ಶ್ರೀನಿವಾಸ ಬಸಪ್ಪ ಹಡಪದ ಎಂಬುವವರೇ ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಇವರು ಸತ್ತೂರ ಬಳಿಯ ಆಕ್ಸಿಜನ್ ಸೆಂಟರ್ ನಲ್ಲಿ ಕಾರ್ಯನಿರ್ಹಿಸುತ್ತಿದ್ದರು. ಮಧ್ಯಾಹ್ನ ಊಟಕ್ಕಾಗಿ ಮನೆಗೆ ಹೋಗಿ ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ತೆರಳಿದ ಧಾರವಾಡದ ಸಂಚಾರಿ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *