ಧಾರವಾಡ ಜಿಲ್ಲೆಗೆ “ಕರಾಳ ರಾತ್ರಿ” 8 ಜನರ ದುರ್ಮರಣ- 20ಕ್ಕೂ ಹೆಚ್ಚು ಜನ ಗಾಯ… 8ಜನರ ಸ್ಥಿತಿ ಗಂಭೀರ…!!!
1 min readಧಾರವಾಡ: ರವಿವಾರದ ರಾತ್ರಿಯೂ ಧಾರವಾಡ ಜಿಲ್ಲೆಗೆ ಕರಾಳ ರಾತ್ರಿಯಾಗಿ ಮಾರ್ಪಟ್ಟಿದ್ದು, ವಿವಿಧ ಭಾಗಗಳಲ್ಲಿ ನಾಲ್ಕು ಅಪಘಾತಗಳು ನಡೆದಿದ್ದು, ಎಂಟು ಜನ ಪ್ರಾಣವನ್ನ ಕಳೆದುಕೊಂಡು, ಹಲವರು ಗಾಯಗೊಂಡಿದ್ದಾರೆ.
ಕಲಘಟಗಿ ತಾಲೂಕಿನ ಹಿರೇಹೊನ್ನಹಳ್ಳಿ ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಧಾರವಾಡ ಮದಿಹಾಳದ ಅರುಣಸಿಂಗ್ ಹಜೇರಿ ಹಾಗೂ ಶ್ರೀಶೈಲ ದೇಶಪಾಂಡೆ ಎಂಬುವವರು ಸಾವಿಗೀಡಾಗಿದ್ದು, ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಅಳ್ನಾವರ ಬಳಿಯಲ್ಲಿ ಟಿಟಿ ವಾಹನ ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ನಡೆದಿದ್ದು, ಮೂವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಧಾರವಾಡ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಉತ್ತರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಸವಾರರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಅಣ್ಣಿಗೇರಿ ಬಳಿ ಕಾರೊಂದು ಪಲ್ಟಿಯಾಗಿ ಕುಮಟಾ ಮೂಲದ ಓರ್ವ ಸಾವಿಗೀಡಾಗಿದ್ದಾನೆ. ಇದೇಲ್ಲರ ನಡಯವೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಿಲಿಂಡರ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು, ಕಿಮ್ಸಗೆ ದಾಖಲಾಗಿದ್ದಾರೆ.