ಭೀಕರ ರಸ್ತೆ ಅಪಘಾತ- ಐವರ ದುರ್ಮರಣ…!

ಯಾದಗಿರಿ: ಟಂಟಂ ಹಾಗೂ ಟ್ಯಾಂಕರ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವಿಗೀಡಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಬಳಿ ಸಂಭವಿಸಿದೆ.

ಮೃತರೆಲ್ಲರೂ ವಡಗೇರ ತಾಲೂಕಿನ ಮುನಮುಟಗಿ ಗ್ರಾಮದವರಾಗಿದ್ದು, ಅಯ್ಯಮ್ಮ (60), ಶರಣಮ್ಮ(40), ಕಾಸೀಂಬೀ (40), ಭೀಮಬಾಯಿ (40), ದೇವಿಂದ್ರಮ್ಮ(70) ಸಾವಿಗೀಡಾಗಿದ್ದಾರೆ. ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ದುರ್ಘಟನೆ.

ಭೀಕರ ರಸ್ತೆ ಅಪಘಾತ ನಡೆದಿದ್ದರಿಂದ ಶವಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಕುಟುಂಬದವರು ರಸ್ತೆಯಲ್ಲಿಯೇ ಕಣ್ಣೀರಾಗುತ್ತಿದ್ದಾರೆ. ದಿನಂಪ್ರತಿ ಟಂಟಂ ವಾಹನದಲ್ಲಿಯೇ ಹೋಗಿ ಬರುತ್ತಿದ್ದ ಇವರಿಗೆ, ಇಂದು ದುರ್ವಿಧಿಯಿಂದ ಘಟನೆ ನಡೆದಿದೆ.