Posts Slider

Karnataka Voice

Latest Kannada News

ಅಪಘಾತ “ಫಾಸ್ಟ್‌ಫುಡ್” ವ್ಯಾಪಾರಿಯ ಇಡೀ ಕುಟುಂಬವೇ ಸಾವು…

1 min read
Spread the love

ಭೀಕರ ರಸ್ತೆ ಅಪಘಾತದಲ್ಲಿ 5 ಜನರು ಸ್ಥಳದಲ್ಲಿಯೇ ಸಾವು…

ಕಲಬುರಗಿ: ಲಾರಿಗೆ ರಭಸವಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಳ್ಳೊಳ್ಳಿ ಕ್ರಾಸ್ ಬಳಿ ನಡೆದಿದೆ.

ನೇಪಾಳ ಮೂಲದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ.

ದುದನಿಯಿಂದ ಅಫಜಲಪುರ ಕಡೆಗೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಮೃತಪಟ್ಟವರೆಲ್ಲರೂ ಅಫಜಲಪುರ ಪಟ್ಟಣದವರು ಎಂದು ತಿಳಿದು ಬಂದಿದೆ.

ಮೃತರು ಅಫಜಲಪುರ ಪಟ್ಟಣದಲ್ಲಿ ಫಾಸ್ಟ್ ಫುಡ್ ಮಾರಾಟ ಮಾಡುತ್ತಿದ್ದರಲ್ಲದೇ ಅಲ್ಲೆ ವಾಸವಿದ್ದರು. ಇನ್ನೂ ಘಟನಾ ಸ್ಥಳಕ್ಕೆ ಅಫಜಲಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *