Posts Slider

Karnataka Voice

Latest Kannada News

ಧಾರವಾಡ ಬಳಿ ಭೀಕರ ಅಪಘಾತ- “ಕುಚಿಕು ಗೆಳೆಯರಿಬ್ಬರ” ಸಾವು, ಮತ್ತೋರ್ವನ ಸ್ಥಿತಿ ಗಂಭೀರ..

1 min read
Spread the love

ವೇಗವಾಗಿ ಹೋಗುತ್ತಿದ್ದ ಕಾರು ಪಲ್ಟಿ

ಸಿಸಿಟಿವಿ ದೃಶ್ಯಾವಳಿಗಳು ವೈರಲ್

ಧಾರವಾಡ: ವೇಗವಾಗಿ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವಿಗೀಡಾದ್ದಾರೆ. ಘಟನೆಯಲ್ಲಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸಿಸಿಟಿವಿ ದೃಶ್ಯ..

ಅಪಘಾತದಲ್ಲಿ ಸಾವಿಗೀಡಾದವರನ್ನ ವಿನಯ ಹಿರೇಮಠ ಮತ್ತು ಸಂದೀಪ ಸಾರಥಿ ಎಂದು ಗುರುತಿಸಲಾಗಿದೆ. ಕಿರಣ ಪ್ಯಾಟಿಮಠ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತುಂಡು ತುಂಡಾಗಿ ಎಲ್ಲೆಂದರಲ್ಲಿ ಬಿದ್ದಿದೆ.

ಘಟನೆಯು ಮುಲ್ಲಾ ಡಾಬಾದ ಬಳಿ ನಡೆದಿದ್ದು, ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನ ಪೊಲೀಸರು ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *