ಮದುವೆಗೆ ಹೊರಟವರು ಮಸಣಕ್ಕೆ: ಮುಷ್ಟೂರು ಕ್ರಾಸ್ ಬಳಿ ದುರ್ಘಟನೆ

ರಾಯಚೂರು: ಸಂಬಂಧಿಗಳ ಮದುವೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಶಾಖಪುರಕ್ಕೆ ಹೊರಟಿದ್ದ ಕ್ರೂಸರ್ ವಾಹನವೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೂ ನಾಲ್ವರು ತೀವ್ರವಾಗಿ ಗಂಭೀರಗೊಂಡ ಘಟನೆ ದೇವದುರ್ಗದ ಮುಷ್ಟೂರು ಕ್ರಾಸ್ ಬಳಿ ಸಂಭವಿಸಿದೆ.
ವೇಗವಾಗಿ ಹೊರಟಿದ್ದ ಕ್ರೂಸರ್ ವಾಹನದ ಸ್ಟೇರಿಂಗ್ ಸಡನ್ನಾಗಿ ಕಿತ್ತು ಬಂದಿದ್ದು, ನಂತರ ವಾಹನ ಪಲ್ಟಿಯಾಗಿದೆ. ವೇಗವಾಗಿ ವಾಹನವಿದ್ದ ಕಾರಣ, ರಸ್ತೆಯುದ್ದಕ್ಕೂ ಜನರು ಗಾಯಗೊಂಡು ಬಿದ್ದಿದ್ದರು. ಸ್ಥಳದಲ್ಲಿಯೇ ಶಬ್ಬೀರ್(50 ) ಹಾಗೂ ಖಾಜಾಸಾಬ ( 65) ಸಾವಿಗೀಡಾಗಿದ್ದಾರೆ.
ಹನುಮಂತ, ಖಾಜಾಬೀ ಸೇರಿದಂತೆ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಮಯವನ್ನ ಉಳಿಸುವ ಸಲುವಾಗಿ ವಾಹನ ಚಲಾಯಿಸಿದ್ದೆ ಘಟನೆಗೆ ಕಾರಣವೆನ್ನಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಗಬ್ಬೂರು ಠಾಣೆ ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.