ಡಿವೈಡರ್ ಬೈಕ್ ಡಿಕ್ಕಿ_ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ
ಧಾರವಾಡ: ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಆಯತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾದ ಘಟನೆ ನಗರದಲ್ಲಿ ಸಂಭವಿಸಿದೆ.
ರಾಯಾಪುರದ ಸಮೀಪ ಬೈಕಿನಲ್ಲಿ ಹೋಗುತ್ತಿದ್ದ ಧಾರವಾಡ ಸರಸ್ವತಿಪುರದ ನಿವಾಸಿ ನಿತಿನ ನಾಗರಾಜ ಹಾಗೂ ಸರಸ್ವತಿಪುರ ಭವಾನಿನಗರದ ಕಾರ್ತಿಕ ಬಸವರಾಜ ಬಾರಕೇರ ಎಂಬ ವಿದ್ಯಾರ್ಥಿಗಳೇ ಡಿವೈಡರಗೆ ಬೈಕಿನಿಂದ ಹೊಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ನಿತಿನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಜೊತೆಗಿದ್ದ ಕಾರ್ತಿಕನ ಕೈ ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದ್ವಿಚಕ್ರ ವಾಹನವನ್ನ ವೇಗವಾಗಿ ಚಲಾಯಿಸುತ್ತಿದ್ದ ಸಮಯದಲ್ಲಿ ಡಿಕ್ಕಿ ಹೊಡೆದ ಪರಿಣಾಮ, ಡಿವೈಡರ್ ಕೂಡಾ ಸಂಪೂರ್ಣ ಬಾಗಿದ್ದು, ಬೈಕ್ ನಜ್ಜಗುಜ್ಜಾಗಿದೆ. ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.