ಹುಬ್ಬಳ್ಳಿಯಲ್ಲಿ 70ಸಾವಿರದೊಂದಿಗೆ ಶಂಕರ ಘೋಡಕೆ ಎಸಿಬಿ ಬಲೆಗೆ…!

ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಗಬ್ಬೂರು ಬಳಿ ಅಕ್ರಮ- ಸಕ್ರಮ ಲೇ ಔಟ್ ನಲ್ಲಿ ಪ್ಯಾಕ್ಟರಿ ನಿರ್ಮಾಣ ಮಾಡಲು ಪರವಾನಿಗೆ ಕೊಡಲು ಲಕ್ಷಾಂತರ ರೂಪಾಯಿ ಲಂಚ ಕೇಳಿದ್ದ ಪಾಲಿಕೆಯ ವಲಯ ನಂಬರ 11ರಲ್ಲಿನ ಎಸ್ ಡಿಸಿಯೋರ್ವರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹಜರತ ಅಲಿ ಮುಲ್ಲಾ ಎಂಬುವರು ಗಬ್ಬೂರು ಬಳಿಯಲ್ಲಿ ಪ್ಯಾಕ್ಟರಿ ಕಟ್ಟಲು ಪರವಾನಿಗೆಯನ್ನ ಕೇಳಿದ್ದರು. ಈ ಸಮಯದಲ್ಲಿ ಪರವಾನಿಗೆ ಕೊಡಲು 1ಲಕ್ಷ 45 ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನ ವಲಯ ನಂಬರ 11ರ ಎಸ್ ಡಿಸಿ ಶಂಕರ ಘೋಡಕೆ ಮಾಡಿದ್ದರು.

ಪದೇ ಪದೇ ಹಣಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಇಂದು ಅಡ್ವಾನ್ಸ್ 70 ಸಾವಿರ ರೂಪಾಯಿ ಕೊಡುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿ, ಹಣದ ಸಮೇತ ಶಂಕರ ಘೋಡಕೆಯನ್ನ ಬಂಧನ ಮಾಡಿದ್ದಾರೆ.
ಎಸಿಬಿ ಡಿಎಸ್ಪಿ ವೇಣುಗೋಪಾಲ, ಇನ್ಸಪೆಕ್ಟರ್ ಹಿರೇಮಠ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.