ಧಾರವಾಡದಲ್ಲಿ ಸಿಕ್ಕಿದ್ದು ಬರೋಬ್ಬರಿ “17ಲಕ್ಷ 80 ಸಾವಿರ ರೂಪಾಯಿ”…
1 min readಧಾರವಾಡ: ತಮಗೆ ಬರಬೇಕಾದ ಹಣವನ್ನ ತಮ್ಮ ಆಪ್ತ ಅಧಿಕಾರಿಯ ಮನೆಯಲ್ಲಿಟ್ಟು, ತಮ್ಮೂರಿಗೆ ಕಳಿಸಲು ಸಂಬಂಧಿಕನನ್ನ ಕಳಿಸಿದ್ದ ಅಧಿಕಾರಿಯ ಸಮೇತ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನೀರಾವರಿ ಇಲಾಖೆಯ ವಿಚಕ್ಷಕ ದಳದಲ್ಲಿನ ಎಇಇ ಶಿವಪ್ಪ ಮಜನಾಳ ಅವರು ತಮಗೆ ಗುತ್ತಿಗೆದಾರರಿಂದ ಪಡೆದಿದ್ದ 17ಲಕ್ಷ 80 ಸಾವಿರ ರೂಪಾಯಿ ಹಣವನ್ನ ಧಾರವಾಡದ ಸತ್ತೂರ ಲೇ ಔಟ್ ನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಎಇ ಪ್ರಶಾಂತ ಸತ್ತೂರ ಅವರ ಮನೆಯಲ್ಲಿಡಲಾಗಿತ್ತು.
ಆ ಹಣವನ್ನ ಇಂದು ಮುಧೋಳದಿಂದ ಬಂದ ಎಇಇ ಶಿವಪ್ಪ ಮಜನಾಳ ಅವರ ಸಹೋದರ ಮಗ ಮಹಾಂತೇಶ ಮಜನಾಳ, ತೆಗೆದುಕೊಂಡು ಹೋಗುತ್ತಿದ್ದ. ಇದೇ ಸಮಯದಲ್ಲಿ ಎಸಿಬಿ ದಾಳಿ ನಡೆದಿದೆ.
ಡಿವೈಎಸ್ಪಿ ಮಹಾಂತೇಶ ಜಿದ್ದಿ, ಇನ್ಸಪೆಕ್ಟರ್ ಅಲಿ ಶೇಖ, ಗಿರೀಶ ಸೇರಿದಂತೆ ಎಸಿಬಿ ತಂಡ ಮೂವರನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.