5 ಸಾವಿರ ರೂ.ಗೆ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಇಂಜಿನಿಯರ್..!
1 min readಮೈಸೂರು: ಕಟ್ಟಡದ ಸಂಬಂಧವಾಗಿ ಹತ್ತು ಸಾವಿರ ಲಂಚ ಕೇಳಿದ್ದ ಮೈಸೂರು ಮಹಾನಗರ ಪಾಲಿಕೆಯ ಕಿರಿಯ ಇಂಜಿನಿಯರೋರ್ವರು ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಲುಕಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ 7 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಕಿರಿಯ ಇಂಜಿನಿಯರ್ ಚಂದ್ರಶೇಖರ್, 5 ಸಾವಿರ ಹಣವನ್ನ ಲಂಚವಾಗಿ ಪಡೆಯುವಾಗ ಎಸಿಬಿಗೆ ಸಿಕ್ಕು ಬಿದ್ದಿದ್ದಾರೆ.
ಮೈಸೂರು ದಕ್ಷಿಣ ವಲಯ ಪೋಲಿಸ್ ಅಧೀಕ್ಷಕ ಅರಣಾಂಗ್ಯು ಗಿರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಗೌರಮ್ಮ ದೂರಿನ ಮೇರೆಗೆ ಪರುಶುರಾಮಪ್ಪ ಕಾರ್ಯಾಚರಣೆ ನಡೆಸಿದ್ದರು.
ಕಟ್ಟಡವೊಂದರ ವಿಚಾರವಾಗಿ ಗೌರಮ್ಮ ಎಂಬುವವರಿಗೆ 10ಸಾವಿರ ಲಂಚ ಕೇಳಿದ್ದ ಚಂದ್ರಶೇಖರ್ ಅವರಿಗೆ ಮುಂಗಡ ಹಣವಾಗಿ ಐದು ಸಾವಿರ ರೂಪಾಯಿಯನ್ನ ಗೌರಮ್ಮ ನೀಡಿದ್ದರು. ಉಳಿದ ಐದು ಸಾವಿರ ಹಣವನ್ನ ನೀಡುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
7( ಎ) ಪಿಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನ ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ.