5 ಸಾವಿರಕ್ಕೆ ‘ಎಸಿಬಿ ಟ್ರ್ಯಾಪ್’ ಆದ ತಹಶೀಲ್ದಾರ…!

ಗ್ರಾಮ ವಾಸ್ತವ್ಯ ಮಾಡಿ ಜನರಿಗೆ ಅನುಕೂಲ ಮಾಡಿ, ಸಮಸ್ಯೆಯನ್ನ ಬಗೆಹರಿಸಿ ಎಂದು ಸರಕಾರ ಬಾಯಿ ಬಾಯಿ ಬಡಿದುಕೊಳ್ಳುತ್ತಲೇ ಇದ್ದಾಗಲೇ ಮಾನ್ಯ ತಹಶೀಲ್ದಾರ ಸಾಹೇಬ್ರು ಲಂಚಕ್ಕೆ ಬೇಡಿಕೆಯಿಟ್ಟಿದ್ದರಂತೆ…!
ಯಾದಗರಿ: ಜಮೀನು ಪಾಲು ಮಾಡಬೇಕೆಂಬ ಕಾರಣಕ್ಕೆ ಲಂಚ ಕೇಳಿದ್ದ ತಹಶೀಲ್ದಾರರೋರ್ವರು ಭ್ರಷ್ಟಾಚಾರ ನಿಗ್ರಹ ದಳದ ಟ್ರ್ಯಾಪ್ ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.

ಗುರುಮಿಠಕಲ್ ತಹಶೀಲ್ದಾರ್ ಸಂಗಮೇಶ ಜಿಡಗೆ ಎಂಬುವವರೇ ಎಸಿಬಿ ದಾಳಿಯಲ್ಲಿ ಸಿಲುಕಿಕೊಂಡಿದ್ದು, ಲಂಚದ ಹಣದ ಸಮೇತ ಭ್ರಷ್ಟಾಚಾರಿ ಎನ್ನುವುದನ್ನ ಸಾಭೀತು ಮಾಡಿದೆ.
ದೊಡ್ಡಬನ್ನಪ್ಪ ಅನ್ನೋರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ದಾಳಿ ನಡೆದಿದೆ. ಜಮೀನು ಪಾಲು ವಿಚಾರಕ್ಕೆ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಹಶೀಲ್ದಾರರು, ಮುಂಗಡವಾಗಿ 5 ಸಾವಿರ ರೂಪಾಯಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ್, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.