ರೈತನಿಂದ ಲಂಚ ಪಡೆಯುತ್ತಿದ್ದ ಇಂಜಿನಿಯರ್ ಎಸಿಬಿ ಬಲೆಗೆ
ಚಿಕ್ಕೋಡಿ: ಕೃಷಿಹೊಂಡ ನಿರ್ಮಾಣ ಬಿಲ್ ಮಂಜೂರ ಮಾಡಲು 6 ಸಾವಿರ ಲಂಚ ಕೇಳಿದ್ದ ಅಥಣಿ ತಾಲೂಕ ಪಂಚಾಯತ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಇಂಜಿನಿಯರ್ ನಾಗಪ್ಪಾ ಮೊಕಾಶಿ ರೈತನಿಂದ 3 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅದಿಕಾರಿಗಳಿಗೆ ಸಿಕ್ಕಾಕಿಕೊಂಡಿದ್ದಾನೆ. ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತ ಅಂಬರೀಶ ದುಗ್ಗಾಣಿ ನೀಡಿದ ದೂರಿನ ಹಿನ್ನೆಲೆ ಎಸಿಬಿ ದಾಳಿ ನಡೆಸಿದಾ ಇಂಜಿನಿಯರ ಬಲೆಗೆ ಸಿಲುಕಿದ್ದಾನೆ.
ಇಂಜಿನಿಯರ್ ಆರಂಭದಲ್ಲಿ 3 ಸಾವಿರ ಹಣ ನೀಡಿದ್ದರು. ಬಾಕಿ 3 ಸಾವಿರ ಹಣ ನೀಡುವಾಗ ಸಿಕ್ಕಾಕಿಕೊಂಡಿದ್ದಾರೆ. ಎಸಿಬಿ ಡಿವೈಎಸ್ಪಿ ಶರಣಪ್ಪ ಮತ್ತು ಸಿಪಿಐ ಎ.ಎಸ್ ಗೂದಿಗೊಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಇಂಜಿನಿಯರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.