ಭ್ರಷ್ಟಅಧಿಕಾರಿಗಳ ಮೇಲೆ ಎಸಿಬಿ ರೇಡ್: ಲಾಕ್ ಡೌನ್ ಸಮಯದಲ್ಲೂ ನಡೆದಿತ್ತು ಭ್ರಷ್ಟಾಚಾರ
ರಾಯಚೂರು/ಕೋಲಾರ: ರಾಯಚೂರು ಪಟ್ಟಣ ಮತ್ತು ಕೋಲಾರದ ಬಂಗಾರಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಪಿ ದಾಳಿಯಾಗಿದ್ದು, ಭ್ರಷ್ಟಅಧಿಕಾರಿಗಳ ಕಚೇರಿ ಮತ್ತು ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.
ರಾಯಚೂರು ನಗರಾಭಿವೃದ್ಧಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ ಗೋಪಶೆಟ್ಟಿಯವರ ಮನೆಯ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಕೋಲಾರದ ಶ್ರೀನಿವಾಸಪುರ ಆರ್ ಎಫ್ ಓ ರಾಮಕೃಷ್ಣರ ಕಚೇರಿ ಮತ್ತು ಮನೆಯ ಮೇಲೂ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ. ಲಾಕ್ ಡೌನ್ ಸಮಯದಲ್ಲೂ ಇಬ್ಬರು ಅಧಿಕಾರಿಗಳು ಸಾಕಷ್ಟು ಹಣವನ್ನ ಪೀಕಿದ್ದಾರೆಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ.