ಹುಬ್ಬಳ್ಳಿ- ‘ಅಬ್ಬಾಸ್ ಗ್ಯಾರೇಜ್’ ನಲ್ಲಿ ಸ್ಪೋಟ್: ಶಬ್ಧಕ್ಕೆ ಹೌಹಾರಿದ್ರು..!
ಹುಬ್ಬಳ್ಳಿ: ಮಟ ಮಟ ಮಧ್ಯಾಹ್ನವೇ ಟೌನಹಾಲ್ ಬಳಿ ಭಾರಿ ಶಬ್ದವಾಗಿ ಎಲ್ಲಿ ಏನಾಯಿತು ಎಂದು ಅಕ್ಕಪಕ್ಕದವರು ಹೊರಗಡೆ ಬಂದು ಹೌಹಾರಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ನೆಹರು ಮೈದಾನದ ಬಳಿಯಿರುವ ಅಬ್ಬಾಸ್ ಬೈಕ್ ಗ್ಯಾರೇಜ್ ನಲ್ಲಿಯೇ ಈ ಅವಘಡ ಸಂಭವಿಸಿದ್ದು, ಯಾರಿಗೂ ಏನೂ ತೊಂದರೆಯಾಗಿಲ್ಲ. ಗ್ಯಾಸ್ ವೆಲ್ಡಿಂಗ್ ಮಾಡುತ್ತಿದ್ದಾಗ ಸಿಲೆಂಡರ್ ಸ್ಪೋಟಗೊಂಡಿದ್ದು, ಎರಡು ತುಂಡಾಗಿ ಗ್ಯಾಸ್ ಬಿದ್ದಿದೆ.
ಗ್ಯಾಸ್ ವೆಲ್ಡಿಂಗ್ ಮಾಡೋವಾಗ ಉಪಯೋಗಿಸುವ ಕಾರ್ಬೋರೇಟ್ ಅತಿಯಾಗಿ ಸ್ಪೋಟಗೊಂಡಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಭಾರೀ ಶಬ್ದವಾಗಿದ್ದರಿಂದ ಅಕ್ಕಪಕ್ಕದ ಶಾಪ್ ನವರು ಕೂಡಾ ಹೊರಗಡೆ ಓಡಿ ಬಂದರು.
ಅಬ್ಬಾಸ್ ಮೇಸ್ತ್ರಿಯ ಅರ್ಮಾನ್ ಮಲ್ಲೀಕ್ ಗ್ಯಾರೇಜಿನಲ್ಲಿ ನಡೆದ ಘಟನೆ ಎಂದು ಕನ್ ಫರ್ಮ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟು ಎಲ್ಲರು ತಮ್ಮ ಕಾಯಕದಲ್ಲಿ ತೊಡಗಿಕೊಂಡರು.