ನಾನೇ ಅಯೋಗ್ಯ ಆಗಿರುವಾಗ ಬಡಜನರ ಬಗ್ಗೆ ಮಾತಾಡೋದು ಏಕೆ: ಆಯನೂರು ಮಂಜುನಾಥ ವ್ಯಂಗ್ಯ

ಬೆಂಗಳೂರು: ನಮ್ಮಅಧಿಕಾರ ದಾಹ ಮತ್ತು ಗೆಲ್ಲುವ ಹಠದಿಂದ ಜನಪ್ರತಿನಿಧಿಗಳೇ ಜನರಿಗೆ ಆಮಿಷವೊಡ್ಡುತ್ತಿದ್ದೇವೆ. ಬಡವರ ಬಗ್ಗೆ ಮಾತಾಡುತ್ತಿರಲ್ಲಾ.. ಶಾಸಕರು ಮತ ಹಾಕಲು ಹಣ ಪಡೆಯುವುದಿಲ್ಲವೇ ಎಂದು ಆಯನೂರು ಮಂಜುನಾಥ ಪ್ರಶ್ನಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲೋದು ಹೇಗೆ ಎಂಬ ಬಗ್ಗೆ ಕಲಾಪದಲ್ಲಿ ನಡೆದ ಚರ್ಚೆಯಲ್ಲಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಚುನಾವಣೆಯಲ್ಲಿ ಹಣ, ಜಾತಿಬಲವಿಲ್ಲದೇ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದರು. ಆಗ ಆಯನೂರು ಮಂಜುನಾಥ ಮಧ್ಯಪ್ರವೇಶಿಸಿ, ಇದಕ್ಕೆ ನಾವೇ ಹೊಣೆಗಾರರು ಎಂದರು.