Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಾರ್ಟಿ ಕಚೇರಿಗಳ ಉದ್ಘಾಟನೆ

Spread the love

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಚೇರಿ ಇಲ್ಲಿನ ಗೋಕುಲ ರಸ್ತೆಯ ಜೆ.ಪಿ.ನಗರದಲ್ಲಿ ಉದ್ಘಾಟನೆಗೊಂಡರೇ, ಧಾರವಾಡದ ಪಕ್ಷದ ಕಚೇರಿ ಗಾಂಧಿನಗರದಲ್ಲಿ ಉದ್ಘಾಟನೆಗೊಂಡಿತು. ಹುಬ್ಬಳ್ಳಿಯ ಕಚೇರಿಯನ್ನು ಉದ್ಯಮಿ ಹಾಗೂ ಪಕ್ಷದ ಪ್ರೋತ್ಸಾಹಕ ಪ್ರಭಾಕರಸಿಂಗ್ ರಜಪೂತ ಉದ್ಘಾಟನೆ ಮಾಡಿದರೇ, ಜಿಲ್ಲಾಧ್ಯಕ್ಷ  ಸಂತೋಷ ನರಗುಂದ ಧಾರವಾಡದ ಕಚೇರಿ ಉದ್ಘಾಟನೆ ಮಾಡಿದರು.

ಹುಬ್ಬಳ್ಳಿ ಕಚೇರಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಆಮ್ ಆದ್ಮಿ ಪಕ್ಷ ಧಾರವಾಡ ಜಿಲ್ಲೆಯಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದು ಪಕ್ಷದ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಿದೆ. ಅವಳಿನಗರದ ಜನರು ಬದಲಾವಣೆ ಬಯಸತ್ತಾಯಿದದ್ದು  ಆ ಅವಕಾಶಕ್ಕೆ ಕಾಯತ್ತಾ ಇದ್ದಾರೆ. ಜನರು ಕಾಂಗ್ರೆಸ್ ಮೇಲಿನ ನಂಬಿಕೆಯನ್ನು ಕಳೆದುಕೊಂಡು ಬಿಜೆಪಿಯನ್ನು ಬಹು ಆಸೆಯಿಂದ ಆರಿಸಿ ತಂದಿದ್ದಾರೆ.  ಆದರೆ ಬಿಜೆಪಿ ಮಾತ್ರ ಹುಸಿ ಮಾತು, ಸುಳ್ಳು ಆಶ್ವಾಸನೆಗಳು, ಟೋಳು ಘೋಷಣೆಗಳಿಂದ ಜನರನ್ನು ಮೋಸ ಮಾಡುತ್ತಿವೆ.

ಅವಳಿನಗರದಲ್ಲಿ ಜಾರಿಗೊಂಡ ಸ್ಮಾರ್ಟ್ ಸಿಟಿ, ಅಮೃತ ಯೋಜನೆ, ಬಿಆರ್ ಟಿಎಸ್, 24*7 ನೀರು, ಚೆನ್ನಮ್ಮ ವೃತ್ತಕ್ಕೆ ಪ್ಲೈ ಓವರ್, ಕೆರೆಗಳ ಪುನರುಜ್ಜೀವನ ಸೇರಿದಂತೆ ಮಹತ್ತರ ಯೋಜನೆಗಳು ಅನುಷ್ಠಾನದಲ್ಲಿ ಕುಂಠಿತಗೊಂಡು ನಗರದ ಸ್ಥಿತಿ ಗಣನೀಯ ಬದಲಾವಣೆಗೊಂಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರು ಜನಪರ ಕೆಲಸಗಳು ಮಾತ್ರ ಶೂನ್ಯಕ್ಕೆ ಎಂಬಂತಾಗಿದ್ದು, ಈ ದಿಸೆಯಲ್ಲಿ ಜನರು ಉತ್ತಮ ಆಡಳಿತಕ್ಕೆ ಹೆಸರಾದ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಮಾಡುತ್ತಿರುವ ಮಾದರಿಯನ್ನು ಹುಡುಕುತ್ತಿದ್ದಾರೆ. ಹೀಗಾಗಿ ಅವಳಿನಗರವನ್ನು ವಿಶ್ವದರ್ಜೆಯ ನಗರವನ್ನಾಗಿಸಲು ಮುಂಬರಲಿರುವ ಹು-ಧಾ ಪಾಲಿಕೆ ಚುನಾವಣೆಗೆ ಆಪ್ ದಿಂದ 82 ವಾರ್ಡ್ ಗಳಿಗೆ ಸಮರ್ಥ, ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಪರಿಚಯಿಸಿ ಅವಳಿನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಆಮ್ ಆದ್ಮಿ ಪಕ್ಷ ಸಿದ್ದಗೊಂಡಿದೆ ಎಂದರು.

ಪಶ್ಚಿಮ ಪದವೀಧರ ಕ್ಷೇತ್ರದ ಸಂಯೋಜಕ ವಿಕಾಸ ಸೊಪ್ಪಿನ ಮಾತನಾಡಿ, ದೆಹಲಿಯಲ್ಲಿ ಅರವಿಂದ ಕ್ರೇಜಿವಾಲ್ ಅವರ ಸಮರ್ಥ ಆಡಳಿತದಿಂದ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ ಮಾದರಿಯಲ್ಲಿ ಹು-ಧಾ ಅವಳಿನಗರವನ್ನು ಮಾಡಲು ಎಎಪಿ ಉತ್ಸುಕವಾಗಿದ್ದು, ಇದಕ್ಕೆ ಜನರು ತಮ್ಮ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ನಂತರ ಪ್ರತಿಭಾ ದಿವಾಕರ ಮಾತನಾಡಿ, ದೆಹಲಿ ಜನಪರ ಆಡಳಿತ ಯಾವ ರೀತಿ ವಿವಿಧ ಆಯಾಮಗಳಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂತಕುಮಾರ ಭಾರತೀಯ, ಲಕ್ಷ್ಮಣ ರಾಥೋಡ, ಪಕ್ಷದ ಮುಖಂಡರಾದ ಪ್ರೋ.ವಿ.ಬಿ.ಮಾಗನೂರ, ಶಿವಲಿಂಗಪ್ಪ ಜಡೇನವರ, ಮೆಹಬೂಬ್ ಹರವಿ, ಬೀಮಸಿ ಪೂಜಾರ, ಮಹಿಳಾ ಘಟಕದ ಉಸ್ತುವಾರಿ ಮೇಘನಾ ಸಾಂಬ್ರಾಣಿ, ಯುವ ಘಟಕದ ಉಸ್ತುವಾರಿ ಡೇನಿಯಲ್ ಐಕೋಸ್, ಶಿವಕುಮಾರ ಬಾಗಲಕೋಟೆ ಸೇರಿದಂತೆ ಪಕ್ಷದ ಮುಖಂಡರು, ವಾರ್ಡ್ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಮುಂತಾದವರು ಇದ್ದರು. ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಶಶಿಕುಮಾರ್ ಸುಳ್ಳದ ಸ್ವಾಗತ ಮಾಡಿದರು.


Spread the love

Leave a Reply

Your email address will not be published. Required fields are marked *