“ಆನಿ-ಮಾನ”- ಇಮಾಮಸಾಬಿಗೂ ಎಲ್ಲಮ್ಮನ ಸನ್ನಿಧಿಗಿರುವಷ್ಟೇ ನಂಟಿದೆಯಂತೆ….
1 min readಧಾರವಾಡ: ರಾಜ್ಯದ ಹಲವೆಡೆ ನಡೆದ ಲೋಕಾಯುಕ್ತ ದಾಳಿಯ ಸಮಯದಲ್ಲಿ ನಡೆದಿರುವ ಹಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿದ್ದು, ಧಾರವಾಡದಲ್ಲಿ ಪೊಲೀಸ್ ಮೇಲೆಯೂ ಎಫ್‌ಐಆರ್ ಆಗುವುದು ನಿಶ್ಚಿತ ಎಂದು ಹೇಳಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾಗಿದ್ದ ಸಂತೋಷ ಆನಿಶೆಟ್ಟರ ಬಳಿ ಅಪಾರವಾದ ಆಸ್ತಿಯ ಮಾಹಿತಿ ಸಿಕ್ಕಿದೆಯಂದು ಹೇಳಲಾಗಿದೆ. ಮಾವನ ಹೆಸರಿನಲ್ಲಿ 50 ಲಕ್ಷದ ಡಿಡಿ ಕೂಡಾ ಲಭಿಸಿದೆ ಎಂಬ ಮಾಹಿತಿಯಿದೆ.
ಧಾರವಾಡ ಶಹರ ಠಾಣೆಯ ಶಿವಾನಂದ ಮಾನಕರ, ಸಂತೋಷ ಆನಿಶೆಟ್ಟರ ಕೂಡಿಕೊಂಡು ರಿಯಲ್ ಎಸ್ಟೇಟ್ ಮಾಡ್ತಾಯಿದ್ರೂ ಎಂಬ ಅನುಮಾನವಿದ್ದು, 50 ಕ್ಕೂ ಹೆಚ್ಚು ಆಸ್ತಿಗಳ ಖರೀದಿ ಮತ್ತು ಮಾರಾಟ ಮಾಡಿರುವ ದಾಖಲೆಗಳು ಲೋಕಾಯುಕ್ತರಿಗೆ ಲಭಿಸಿವೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಪೊಲೀಸ್ ಶಿವಾನಂದ ಮಾನಕರ ವಿರುದ್ಧ fir ದಾಖಲಾಗುವುದು ನಿಶ್ಚಿತವೆಂದು ಹೇಳಲಾಗುತ್ತಿದ್ದು, ಸಂತೋಷ ಆನಿಶೆಟ್ಟರ ಜೊತೆ ಇನ್ನೂ ಹಲವರು ವ್ಯವಹಾರ ಹೊಂದಿದ್ದಾರೆಂಬ ಮಾಹಿತಿಯ ಬಗ್ಗೆ ಲೋಕಾಯುಕ್ತರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಧಾರವಾಡದಿಂದ ವರ್ಗಾವಣೆಯಾಗಿರುವ ಪ್ರಮುಖ ಪತ್ರಿಕೆಯೊಂದರ ವರದಿಗಾರ ಕೂಡಾ ಸಂತೋಷ ಆನಿಶೆಟ್ಟರ್ ಜೊತೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆಂಬ ವದಂತಿಯಿದ್ದು, ಲೋಕಾಯುಕ್ತರು ಈ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆಂದು ಹೇಳಲಾಗಿದೆ.