“ಸಂತೋಷ ಲಾಡ ಫೌಂಡೇಶನ್”ಗೆ ಪ್ರಶಸ್ತಿ: ಅಸಲಿ ಕಾರಣಿಕರ್ತರು ಯಾರೂ… ‘ಆನಂದ ಕಲಾಲ’ ಹೇಳಿದ ಸತ್ಯ…!!!

ಹುಬ್ಬಳ್ಳಿ: ಲಕ್ಷಾಂತರ ಅಭ್ಯರ್ಥಿಗಳಿಗೆ ಐಎಎಸ್ ಸೇರಿದಂತೆ ಬಹು ಮುಖ್ಯ ನೌಕರಿ ಗಿಟ್ಟಿಸಿಕೊಳ್ಳಲು ಆನ್ ಲೈನ್ ಮೂಲಕ ಕೋಚಿಂಗ್ ನೀಡಿದ್ದ “ಸಂತೋಷ ಲಾಡ್ ಫೌಂಡೇಶನ್”ಗೆ ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ North Karnataka Social Awardನ್ನ ನೀಡಿ ಗೌರವಿಸಿದ್ದು, ಅದರ ಬೆನ್ನೆಲಬಾಗಿದ್ದ ಯುವ ನಾಯಕ ಆನಂದ ಕಲಾಲ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.
ಮಾಜಿ ಸಚಿವ ಸಂತೋಷ ಲಾಡ ಅವರ ಕನಸಿನ ಕೂಸಾಗಿದ್ದ ಆನ್ ಲೈನ್ ತರಬೇತಿಯನ್ನ ಯಶಸ್ವಿಗೊಳಿಸಿದ್ದು ಆನಂದ ಕಲಾಲ ಅವರ ಟೀಂ ಆದರೂ, ಇದರ ನಿಜವಾದ ಶ್ರೇಯಸ್ಸು ಕಲಘಟಗಿ ಹಾಗೂ ಅಳ್ನಾವರ ಬ್ಲಾಕ್ ಕಾಂಗ್ರೆಸ್ ನ ಪ್ರಮುಖರು ಎಂಬುದನ್ನ ಸ್ವತಃ ಆನಂದ ಕಲಾಲ ಹೇಳಿದ್ದಾರೆ.
ಆನ್‌ಲೈನ್ ತರಬೇತಿ ಕೊಡಲು ಲಕ್ಷಾಂತರ ರೂಪಾಯಿಗಳನ್ನ ಖರ್ಚು ಮಾಡಿದ್ದು, ಸಂತೋಷ ಲಾಡ ಅವರ ಮಾನವ ಪ್ರೀತಿಯನ್ನ ತೋರಿಸತ್ತೆ. ಯಾವುದೇ ಜಾತಿ-ಮತಕ್ಕೆ ಸಿಮೀತವಾಗದ ತರಬೇತಿ ಉತ್ತರ ಕರ್ನಾಟಕದ ಜನರಿಗಂತೂ ಸಂಜೀವಿನಿಯಾಗಿತ್ತು.
ಸಂತೋಷ ಲಾಡ ಅವರ ಬಯಕೆಯನ್ನ ಈಡೇರಿಸಲು ಆನಂದ ಕಲಾಲ ಅವರ ಟೀಂ ಹಗಲಿರುಳು ಶ್ರಮಿಸಿತ್ತು. ಆ ಶ್ರಮವನ್ನ ಗುರುತಿಸಿ ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ಪ್ರಶಸ್ತಿ ನೀಡಿದ್ದು, ಅವರ ಕಾರ್ಯವನ್ನ ಮತ್ತಷ್ಟು ಗುರುತಿಸುವಂತೆ ಮಾಡಿದೆ.