ತಮ್ಮ ಅಭ್ಯರ್ಥಿಯ “ಅಪಿಡೆವಿಟ್” ಬಹಿರಂಗಪಡಿಸಿದ “ಆಮ್ ಆದ್ಮಿ ಪಕ್ಷ”- ಹೊಸತನಕ್ಕೆ ನಾಂದಿ…!
1 min readಹುಬ್ಬಳ್ಳಿ: ಭ್ರಷ್ಟಾಚಾರ ನಿರ್ಮೂಲನೆ ಆಮ್ ಆದ್ಮಿ ಪಕ್ಷದ ಮೂಲ ಸಿದ್ಧಾಂತ. ಅದರ ಆಧಾರದ ಮೇಲೆಯೇ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಎದುರಿಸುತ್ತಿದ್ದೇವೆ. ಶುದ್ಧ ರಾಜಕಾರಣಕ್ಕಾಗಿ ಸುಶಿಕ್ಷಿತ, ಸಮರ್ಥ, ಜನಪರ 41 ಅಭ್ಯರ್ಥಿಗಳನ್ನು ಪಾಲಿಕೆ ಚುನಾವಣೆಗೆ ನಿಲ್ಲಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಆಮ್ ಆದ್ಮಿ ಪಕ್ಷವು ರಾಜ್ಯ ಮತ್ತು ಹು-ಧಾ ಮಹಾನಗರದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಜಾತಿ ಮತ್ತು ಧರ್ಮವನ್ನು ಬದಿಗಿಟ್ಟು, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ದೆಹಲಿ ಮಾದರಿಯಲ್ಲಿ ಅವಳಿನಗರವನ್ನು ಅಭಿವೃದ್ಧಿಪಡಿಸುವುದೇ ಪಕ್ಷದ ಅಜೆಂಡಾವಾಗಿದೆ. ‘ಬೇರೆ ಪಕ್ಷಗಳಂತೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಟಿಕೆಟ್ ಕೊಟ್ಟಿಲ್ಲ. ಬದಲಾಗಿ ಸೇವಾ ಮನೋಭಾವ, ಜನಪರತೆ ಹಾಗೂ ಜನರಿಗೆ ಆಕಾಂಕ್ಷೆಗಳನ್ನು ಆಯ್ಕೆ ಮಾಡಲಾಗಿದೆ. ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ವಾರ್ಡ್ ಗಳಲ್ಲಿ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆ ಪೈಕಿ ಅತಿ ಹೆಚ್ಚು ಸುಶಿಕ್ಷಿತ ವಯೋಮಾನದ ಅಭ್ಯರ್ಥಿಗಳೇ ಆಗಿದ್ದಾರೆ. ಅದರಲ್ಲೂ 21 ರಿಂದ 30 ವಯಸ್ಸಿನ ಯುವಕ, ಯುವತಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದು ಮತ್ತೊಂದು ವಿಶೇಷವಾಗಿದೆ ಎಂದರು.
1) ಅಮಿತ್ ವಾಲಿಕಾರ (22)
2) ರೋಹಿನಿ ಸೋಮನಕಟ್ಟಿ (22)
3) ಧನರಾಜ್ ಗೋಪಾಲ ಚಂದಾವರಿ (29)
4) ಮನೋಜ ಕಾಮಕರ (24)
5) ಮೋಹನ ಪಾಟೀಲ್ (28)
6) ವಿಕ್ಕಿ ಆಶೀಶ್ ಇಗೋಣಿ (25)
7) ಫಯಾಜ್ ಅಹ್ಮದ್ ಸೌದಾಗಾರ (30)
8) ಮೌಲ್ಯ ವಿಠ್ಠಲ ಪವಾರ್ ( 30)
ಜನಪರ ಆಡಳಿತ ನಡೆಸಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಅಪರಾಧರಹಿತ, ಕೋಮುವಾದಿಗಳಲ್ಲದ, ಭ್ರಷ್ಟಾಚಾರರಹಿತ ಈ ಮೂರು ಮಾನದಂಡಗಳನ್ನು ಅನುಸರಿಸಿ ಕೂಲಂಕುಷವಾಗಿ ಪರಿಶೀಲಿಸಿ ಅಭ್ಯರ್ಥಿಗಳ ಪಟ್ಟಿ ಅಂತಮಗೊಳಿಸಲಾಗಿದೆ. 600 ಅರ್ಜಿಗಳು ಬಂದಿದ್ದರೂ ಸಹಿತ 40 ಅಭ್ಯರ್ಥಿಗಳನ್ನು ಮಾತ್ರ ಹುಬ್ಬಳ್ಳಿ – ಧಾರವಾಡ ಮಹಾನಗರಪಾಲಿಕೆ ಚುನಾವಣಾ ಕಣಕ್ಕೆ ಇಳಿಸಿದ ಕಾರಣ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅದೇ ರೀತಿ ಅಫಿಡವಿಟ್ ಮಾಡಿಸಿದ್ದಕ್ಕಾಗಿ. ಈ ಮೂಲಕ ಮಾಧ್ಯಮ ಮಿತ್ರರ ಮುಖೇನ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ವಿವರಗಳ ಪ್ರತಿಯನ್ನು ಬಹಿರಂಗವಾಗಿ ಬಿಡುಗಡೆ ಮಾಡಲಿದೆ ಇದೇ ರೀತಿ ಉಳಿದ ರಾಷ್ಟ್ರೀಯ ಪಕ್ಷಗಳೂ ಸಹಿತ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರಗಳ ಬಿಡುಗಡೆ ಮಾಡಬೇಕೆಂದು ಸವಾಲು ಹಾಕುತ್ತದೆ ? ಈ ಕೆಳಗಿನ ಲಿಂಕ್ ನಲ್ಲಿ ಎಲ್ಲ ಅಭ್ಯರ್ಥಿಗಳ ಅಫಿಡವಿಟ್ ನೀಡಲಾಗಿದೆ.
https://drive.google.com/folderview?id=1O8nUfivhhTm9lrcluPWNd0NN9i6EoZuv
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರಾಜಕೀಯ ಸಲಹಾಗಾರರಾದ ಎಸ್. ಟಿ. ಪೂಜಾರ, ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲ ಕುಲಕರ್ಣಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಜಯ ಶಾಸ್ತ್ರಿಮಠ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಶಾಮ ನರಗುಂದ ಹಾಗೂ ಜೊತೆಗೆ 21-30 ರ ಯುವ ಅಭ್ಯರ್ಥಿಗಳು ಮಾತನಾಡಿದರು.