ರಾಜಣ್ಣ ಕೊರವಿ ಬೆಂಬಲಿಗರಿಂದ ಬೆದರಿಕೆ: 25ಲಕ್ಷ ರೂಪಾಯಿ ಆಮಿಷ…!?

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯ ಕಾವು ಹೆಚ್ಚುತ್ತಿದ್ದು, ಹಲವರು ಹಲವು ರೀತಿಯಲ್ಲಿ ಗೆಲವು ಸಾಧಿಸಲು ಮುಂದಾಗುತ್ತಿದ್ದು, ಕೆಲವರು ಧಮಕಿ ಹಾಕುತ್ತಿದ್ದಾರೆಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಬೆಂಬಲಿಗರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಸಂತೋಷ ನರಗುಂದ ಹೇಳಿದರು.
ಆರೋಪವೇನು ಇಲ್ಲಿದೆ ಕೇಳಿ..
ಎಎಪಿ ಅಭ್ಯರ್ಥಿ ಮಲ್ಲಯ್ಯ ತಡಸದಗೆ 25 ಲಕ್ಷ ನೀಡುವುದಾಗಿ ಬಿಜೆಪಿ ಆಮಿಷವೊಡ್ಡಿತ್ತು. ಈ ಬಗ್ಗೆ ಎಎಪಿ ಯಿಂದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಸುದ್ದಿಗೋಷ್ಠಿ ಮೂಲಕ ಆಪ್ ಮುಖಂಡ ಸಂತೋಷ ನರಗುಂದ ಆರೋಪಿಸಿದರು.