ರಾಣೆಬೆನ್ನೂರ ಶಾಸಕರಿಗೆ ಮೋದಿ ಮಾತಂದ್ರೇ ಅಲರ್ಜಿ: ಬಿಜೆಪಿಯವರಾಗಿಯೂ ಹಿಂಗ್ಯಾಕೆ..!
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳನ್ನ ಪಾಲಿಸುವುದೇ ಇಲ್ಲ. ಅವರದ್ದೇನಿದ್ದರೂ ರೂಲ್ಸ್ ಮುರಿಯೋದೆ ಮುಖ್ಯ ಕೆಲಸವಾಗಿದೆ. ಕೊರೋನಾ ಸಮಯದಲ್ಲಿ ಹೇಗಿರಬೇಕೆಂಬ ಮಾತನ್ನೂ ಕೇಳುತ್ತಿಲ್ಲ, ಆದರೂ ಇವರು ಜನಪ್ರತಿನಿಧಿ.
ಹೌದು.. ರಾಣೆಬೆನ್ನೂರು ಶಾಸಕ ಅರುಣಕುಮಾರ ಯಾವತ್ತೂ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುತ್ತಿಲ್ಲ. ಶಾಸಕರಿರುವುದೇ ಸರಕಾರದ ಆದೇಶಗಳನ್ನ ಬ್ರೇಕ್ ಮಾಡೋಕೆ ಅನ್ನೋ ಥರಾ ಜೀವನ ನಡೆಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜನರು ಕೊರೋನಾ ಪಾಸಿಟಿವ್ ಬಂದು ತೀರಿಕೊಂಡಿದ್ದಾರೆ. ನಾಲ್ಕೂ ಸಾವಿರದ ಗಡಿಯನ್ನ ಪಾಸಿಟಿವ್ ಪ್ರಕರಣಗಳು ದಾಟುತ್ತಿವೆ. ಆದರೂ ಶಾಸಕರಿಗೆ ಬರ್ತಡೇ ಮಾಡಿಕೊಳ್ಳುವ ಗೀಳು. ನಿನ್ನೆ ಕೂಡಾ ಶಾಸಕ ಅರುಣಕುಮಾರ, ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕರೂರು ಗ್ರಾಮದಲ್ಲಿ ಆಚರಣೆ ಮಾಡಿಕೊಂಡಿದ್ದಾರೆ.
ತಡರಾತ್ರಿವರೆಗೂ ಜರುಗಿದ ಶಾಸಕರ ಜನ್ಮದಿನಾಚರಣೆಯಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಇನ್ನೂ ಸಾಮಾಜಿಕ ಅಂತರದ ಮಾತೇಲ್ಲಿ ಬರುತ್ತೆ. ಶಿಸ್ತಿನ ಪಕ್ಷದ ಶಾಸಕರ ಈ ನಿರ್ಧಾರಗಳು ಪ್ರಜ್ಞಾವಂತ ಬಿಜೆಪಿ ಕಾರ್ಯಕರ್ತರಲ್ಲಿ ಇರುಸು ಮುರುಸು ಉಂಟು ಮಾಡಿದೆ.
                      
                      
                      
                      
                      