ಕೊರೋನಾ ಗೆದ್ದು ಬಂದ ಟ್ರಬಲ್ ಶೂಟರ್: ಶುಭಾಶಯಗಳ ಸುರಿಮಳೆ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಕೊರೋನಾ ಗೆದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನೂರಾರೂ ಜನರು ಆಸ್ಪತ್ರೆಗೆ ಆದಮಿಸಿ ಅಭಿನಂದನೆ ಸಲ್ಲಿಸಿದರು.
ಕೆಲವು ದಿನಗಳ ಹಿಂದೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಕುಮಾರರಿಗೆ ಕ್ಷೇಮವಾಗಲಿ ಎಂದು ರಾಜ್ಯದ ಹಲವೆಡೆ ಪೂಜೆ-ಪುನಸ್ಕಾರ ನಡೆದಿದ್ದವು.
ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿದ್ದಾಗಲೇ ವೀಡಿಯೋ ಮೂಲಕ ಪಕ್ಷದ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದರು.
ಇಂದು ಕೊರೋನಾ ಪಾಸಿಟಿವ್ ನಿಂದ ಗೆದ್ದು ಬಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ಆಸ್ಪತ್ರೆಯಿಂದ ಹೊರಗಡೆ ಬಂದ ತಕ್ಷಣವೇ ವೈದ್ಯರು, ಅಭಿಮಾನಿಗಳು ಡಿಕೆಶಿಯವರಿಗೆ ಅಭಿನಂದನೆ ಸಲ್ಲಿಸಿದರು.